ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ವತಿಯಿಂದ ಕೊರೊನಾ ವಾರಿಯರ್ಸ್ ಮತ್ತು ಪಂಚಾಯತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಜುಲೈ. 20 ರ ಸೋಮವಾರ ಪಂಚಾಯತ್ ಕಛೇರಿ ಯಲ್ಲಿ ಜರಗಿತು.

ಕಳೆದ ಐದು ವರ್ಷಗಳಿಂದ ಪಂಚಾಯತ್ ನ ಸರ್ವತೋಮುಖ ಅಭುವೃದ್ದಿಗೆ ನಿರಂತರವಾಗಿ ದುಡಿದ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಮತ್ತು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಮುಖ್ಯ ಆರೋಗ್ಯ ಸಹಾಯಕಿಯರು ಹಾಗು ಆಶಾಕಾರ್ಯಕರ್ತೆಯರಿಗೆ ಫಲಪುಷ್ಪ, ಸ್ಮರಣಿಕೆ ನೀಡಿ ಶಾಲು ಹೊದೆಸಿ ಅಭಿನಂದಿಸಲಾಯಿತು.
ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ್ ಮೆಂಡ, ಪಿಡಿಓ ಶ್ರೀಮತಿ ವಸಂತಿ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿಗಳು ಹಾಜರಿದ್ದರು.
