ಕೈಕಂಬ : ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್, ಅರಣ್ಯ ಇಲಾಖೆ ಹಾಗೂ ಗುರುಪುರ ಕಾರಮೊಗರುಗುತ್ತು ಕುಟುಂಬಿಕರ ಜಂಟಿ ಆಶ್ರಯದಲ್ಲಿ ಜು. 15ರಂದು ಫಲ್ಗುಣಿ ನದಿ ತೀರದ ಕಾರಮೊಗರುಗುತ್ತು ರಸ್ತೆ ಪ್ರದೇಶದಲ್ಲಿ `ಹಸಿರು ಮಡಿಲು’ ವನಮಹೋತ್ಸವ-2020 ಕಾರ್ಯಕ್ರಮ ಜರುಗಿತು.
ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಲಯ ಅಧಿಕಾರಿ ಪಿ ಶ್ರೀಧರ್ ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಾಲಿ ಜಾಗದಲ್ಲಿ ಅರಣ್ಯ ಗಿಡಗಳ ನೆಟ್ಟು ಪರಿಸರದಲ್ಲಿ ಅರಣ್ಯ ಬೆಳೆಸುವ ಸಂಘದ ಕೆಲಸ ಶ್ಲಾಘನೀಯವಾದುದು ಎಂದರು.
ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ಅಧ್ಯಕ್ಷ ಕಾರಮೊಗರುಗುತ್ತು ಜಿ ಕೆ ಹರಿಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಪ್ರೇಮಿ ಲಯನ್ಸ್ ಜಿಲ್ಲಾ ಮುಖಂಡ ಮಾಧವ ಉಳ್ಳಾಲ, ಲಯನ್ಸ್ ಅಂತಾರಾಷ್ಟ್ರೀಯ ಅಧ್ಯಕ್ಷರ ಜಿಲ್ಲಾ ಕಾರ್ಯಕ್ರಮ ಅಧ್ಯಕ್ಷ ವಿನೋದ ದೇವಸ್ಯ, ಮೆಟ್ರೋ ಗೋಲ್ಡ್ ಸಾಮಾಜಿಕ ಸೇವಾ ಚಟುವಟಿಕೆ ಅಧ್ಯಕ್ಷ ಕೆ ಎಸ್ ಉಪಾಧ್ಯಾಯ, ಕಾರಮೊಗರುಗುತ್ತು ಕುಟುಂಬಿಕರಾದ ಕೃಷಿಕ ಕಿಟ್ಟಣ್ಣ ರೈ ಹಾಗೂ ವಸಂತ ರೈ, ಅಶೋಕ ಶೆಟ್ಟಿ, ಉಷಾ ಎ ಶೆಟ್ಟಿ, ಮಮತಾ ವಿ ರೈ, ರಾಜಲಕ್ಷ್ಮೀ ರೈ, ಸುರತರಾಜ್ ಶೆಟ್ಟಿ, ಸುಚೇತ್ ಪೂಂಜ, ಹೇಮಾವತಿ ಎಸ್ ಶೆಟ್ಟಿ ಮೊದಲಾದವರಿದ್ದರು. ಕ್ಲಬ್ ಕಾರ್ಯದರ್ಶಿ ಪದ್ಮನಾಭ ಕುಮಾರ್ ವಂದಿಸಿದರು.
