ಕುಪ್ಪೆಪದವು ಸಂಪೂರ್ಣ ವಾಗಿ ನವೀಕೃತಗೊಂಡ ಕುಪ್ಪೆಪದವು ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾಲ್ ಸಾಲ್ದಾನ್ಹ ಅವರು ಶನಿವಾರ ಉದ್ಘಾಟಿಸಿದರು.
ಪ್ರಾರ್ಥನೆ ಸೇರಿದಂತೆ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ನಂತರ ನಡೆದ ಸರಳ ಸಮಾರಂಭದಲ್ಲಿ ತನ್ನ ಸಂದೇಶ ನೀಡಿದ ಬಿಷಪ್ ಅವರು ಧಾರ್ಮಿಕ ಕೇಂದ್ರಗಳು ಭಕ್ತರಿಗೆ ನೆಮ್ಮದಿ ಮತ್ತು ಮನಸ್ಸಿಗೆ ಶಾಂತಿ ನೀಡುವ ಸ್ಥಳಗಳಾಗಿವೆ ದೇವರ ಆಪೇಕ್ಷೆಯಂತೆ ಈ ಚರ್ಚ್ ನಿರ್ಮಾಣವಾಗಿದೆ ಪವಿತ್ರವಾದ ಈ ಕ್ಷೇತ್ರ ಎಲ್ಲಾ ಜನರನ್ನು ಆಕರ್ಷಿಸುವ ಕೇಂದ್ರವಾಗಲಿ ಇಲ್ಲಿ ಭಕ್ತರು ಹೊಸ ಹುಮ್ಮಸ್ಸಿನಿಂದ ಪ್ರಾರ್ಥಿಸುವ ಸೌಭಾಗ್ಯವನ್ನು ದೇವರು ಕರುಣಿಸಲಿ ಇಂತಹ ಸುಂದರ ಚರ್ಚ್ ನಿರ್ಮಾಣದ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರನ್ನೂ ದೇವರು ಅನುಗ್ರಹಿಸಲಿ ಎಂದರು.
ಚರ್ಚ್ ನಿರ್ಮಾಣದಲ್ಲಿ ಕಾರ್ಯನಿರ್ವಹಿದ ಇಂಜಿನೀಯರ್, ಗುತ್ತಿಗೆದಾರರು ಮತ್ತು ಇತರ ಕೆಲಸಗಾರರಿಗೆ ನೆನಪಿನ ಕಾಣಿಕೆ ಮತ್ತು ಹೂಗುಚ್ಛ ನೀಡಿ ಬಿಷಪ್ ಅವರು ಹರಸಿದರು. ಕುಪ್ಪೆಪದವು ಚರ್ಚ್ ನ ಧರ್ಮಗುರುಗಳಾದ ಫಾ|ವಲೇರಿಯನ್ ಡಿ’ಸೋಜಾ, ಜೆಪ್ಪು ಸೆಮಿನರಿಯ ಧರ್ಮಗುರುಗಳಾದ ಫಾ| ಅನಿಲ್ ಪಿಂಟೋ, ಸುರತ್ಕಲ್ ಚರ್ಚ್ ನ ಧರ್ಮಗುರುಗಳಾದ ಫಾ| ಪಾಲ್ ಪಿಂಟೋ,ಮತ್ತು ಫಾ| ವಿಜಯ್ ಮಚಾದೋ, ಫಾ| ಮ್ಯಾಕ್ಷಿo ರೊಜಾರಿಯೋ ಮೊದಲಾದವರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೋಸೆಫ್ ಮೊರಾಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಗ್ರೆಗರಿ ರೊಜಾರಿಯೋ ಕಾರ್ಯಕ್ರಮ ನಿರ್ವಹಿಸಿದರು ಪಾಲನಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಲೋನಾ ರೊಜಾರಿಯೋ ವಂದನಾರ್ಪಣೆಗೈದರು.
