ಬಂಟ್ವಾಳ: ಕಳೆದ ಮೂರು ವರ್ಷದ ಸಾಲಿನಲ್ಲಿ ಬಂಟ್ವಾಳ ತಾಲೂಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ೧೩.೬೪ ಕೋ.ರೂ. ಮಾರುಕಟ್ಟೆ ಶುಲ್ಕವನ್ನು ಸಂಗ್ರಹಿಸಿದೆ ಎಂದು ಸಮಿತಿ ನಿರ್ಗಮನ ಅಧ್ಯಕ್ಷ ಪದ್ಮನಾಭ ರೈ ಹೇಳಿದ್ದಾರೆ.ಕಳೆದ ೪೦ ತಿಂಗಳು ಬಂಟ್ವಾಳ ಎಪಿಎಂಸಿಗೆ ಅಧ್ಯಕ್ಷರಾಗಿ ಶುಕ್ರವಾರ( ಜೂ.೧೯) ತಮ್ಮ ಅಧಿಕಾರದ ಅವಧಿ ಪೂರ್ಣಗೊಳ್ಳಲಿರುವ ಹಿನ್ನಲೆಯಲ್ಲಿ ತಮ್ಮ ಅವಧಿಯಲ್ಲಾದ ಸಾಧನೆಗಳ ಕುರಿತು ಗುರುವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು.
ರೈತರ ಜಮೀನಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು ೧.೭ ಕೋ.ರೂ.ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ ಅವರು ಇದರಲ್ಲಿ ೨೦೨೦-೨೧ ಸಾಲಿಗೆ ೫೦ ಲಕ್ಷ ರೂ.ವೆಚ್ಚದಲ್ಲಿ ೧೫ ಸಂಪರ್ಕ ರಸ್ತೆಗೆ ೫೦ ಲಕ್ಷ ರೂ.ವಿನ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು. ಪರಿಹಾರ ನಿಧಿಗೆ ೨೫ ಲಕ್ಷ: ಮುಖ್ಯಮಂತ್ರಿಗಳ ಕೋವಿಡ್- ೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಪಿಎಂಸಿಗಳ ಪೈಕಿ ರಾಜ್ಯದಲ್ಲಿಯೇ ಮೊದಲಿಗೆ ಬಂಟ್ವಾಳ ಎಪಿಎಂಸಿಯಿಂದ ೨೫ ಲಕ್ಷ ರೂ.ನೀಡಿದೆ.ಲಾಕ್ ಡೌನ್ ವೇಳೆ ರೈತರ ಉತ್ಪನ್ನಗಳನ್ನು ಮಾರಾಟ ಹಾಗೂ ಖರೀದಿ ಮಾಡುವ ನಿಟ್ಟಿನಲ್ಲಿ ಕ್ಯಾಂಪ್ಕೋ ಅಧ್ಯಕ್ಷರ ಮೂಲಕ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಅನುಕೂಲ ಮಾಡಿಕೊಡಲಾಗಿದೆ ಎಂದರು. ಮೆಲ್ಕಾರ್ ನಲ್ಲಿ ಪ್ರಾಂಗಣ: ಬಂಟ್ವಾಳ ಎಪಿಎಂಸಿಗೆ ಸುಸಜ್ಜಿತ ಪ್ರಾಂಗಣ ನಿರ್ಮಾಣಕ್ಕಾಗಿ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಲ್ಲಿ ಜಮೀನು ಗುರುತಿಸಲಾಗಿದೆ.ಈ ಜಮೀನನ್ನು ಸಮತಟ್ಟುಗೊಳಿಸುವ ಕಾರ್ಯ ನಡೆಯಬೇಕಾಗಿದೆ.ಇಲ್ಲಿ, ರೈತರ ಉತ್ಪದನೆಗಳನ್ನು ದಾಸ್ತಾನಿರಿಸಲು ೧೦೦೦ ಮೆಟ್ತಿಕ್ ಟನ್ ಸಾಮಥ್ಯ೯ದ ಗೋದಾಮು ನಿರ್ಮಾಣಕ್ಕೆ ೧.೨೫ ಕೋ.ರೂ.ಅನುದಾನ ಮೀಸಲಿಡಲಾಗಿದೆ.ಸದ್ಯ ಈ ಜಮೀನನ್ನು ಸಮತಟ್ಟು ಮಾಡುವ ಪ್ರಕ್ರಿಯೆಗೆ ಆಡಳಿತಾತ್ಮಕ ಮಂಜೂರಾತಿ ಬಾಕಿ ಇದೆ.ಈ ಜಮೀನು ಎಪಿಎಂಸಿಯ ಹೆಸರನಲ್ಲಿ ಮಂಜೂರು ಮಾಡಿಸುವಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಅವರ ಶ್ರಮಸಿದ್ದರು ಎಂದರು.ನಬಾಡ್೯ ಯೋಜನೆಯಲ್ಲಿ ೭೫ ಲ.ರೂ.ವೆಚ್ಚದಲ್ಲಿಮಾಣಿ,ಮಣಿನಾಲ್ಕೂ
