ಬಂಟ್ವಾಳ: ಶೌಚಾಲಯವೊಂದರ ಗುಂಡಿ ತುಂಬಿ ಗ್ರಾಮಸಾರವು ಬಹಿರಂಗ ಜಾಗದಲ್ಲಿ ಹರಿಯುತ್ತಿದ್ದು ಸ್ವಚ್ಚಗೊಳಿಸುವಂತೆ ಬಂಟ್ವಾಳ ಪುರಸಭೆಗೆ 6 ತಿಂಗಳ ಹಿಂದೆಯೇ ಲಿಕೀತ ದೂರು ನೀಡಿದ್ದರೂ ಇನ್ನೂ ನಿರ್ಲಕ್ಷ ವಹಿಸುತ್ತಿರುವ ಪುರಸಭೆಯ ಅಧಿಕಾರಿಗಳ ವಿರುದ್ದ ಬಂಟ್ವಾಳ ಪೇಟೆ ನಿವಾಸಿ ಅರುಣ್ ಭಟ್ ಜಿಲ್ಲಾಧಿಕಾರಿಗೆ ದೂರು ನೀಇಡಲು ನಿರ್ಧರಿಸಿದ್ದಾರೆ.
ಬಂಟ್ವಾಳ ಪೇಟೆಯ ಕಾಮತ್ಲೇನ್ನ ಬಾಡಿಗೆ ಮನೆ ನಿವಾಸಿಯಾಗಿರುವ ಅರುಣ್ ಭಟ್ ಅವರ ಮನೆ ಹಿಂಬಂದಿಯಲ್ಲಿ ಖಾಸಗಿ ವ್ಯಕ್ತಿಯೋರ್ವರ ಶೌಚಾಲಯದ ಪಿಟ್ ತುಂಬಿ ಗ್ರಾಮಸಾರವೂ ಬಹಿರಂಗವಾಗಿ ಹರಿಯುತ್ತಿದೆ. ಇದರಿಂದಾಗಿ ಮನೆಪರಿಸರ ದುವರ್ಾಸನೆ ಬೀರುತ್ತಿದ್ದು ಮನೆಯಲ್ಲಿ ವಾಸಿಸಲು ಅನುಕೂಲವಾಗುತ್ತಿದೆ. ಈ ಬಗ್ಗೆ ಕಳೆದ ಎಪ್ರಿಲ್ ತಿಂಗಳಿನಲ್ಲಿ ಬಂಟ್ವಾಳ ಪುರಸಭೆಗೆ ಲಿಖಿತ ದೂರು ಸಲ್ಲಿಸಿ ಸ್ವಚ್ಚಗೊಳಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಅಲ್ಲದೆ ಸ್ಥಳೀಯ ಪುರಸಭಾ ಸದಸ್ಯರ ಗಮನಕ್ಕೂ ತರಲಾಗಿತ್ತು. ಆದರೆ ಪುರಸಭೆಯ ಅಧಿಕಾರಿಗಳು ಒಂದು ವಾರ ಬಿಟ್ಟು ಬನ್ನಿ ಎಂದು ಕಳೆದ ಆರು ತಿಂಗಳಿನಿಂದಲೂ ಸತಾಯಿಸುತ್ತಿದ್ದಾರೆ ಎಂದು ಅರುಣ್ ಭಟ್ ಆರೋಪಿಸಿದ್ದಾರೆ. ಈ ಬಗ್ಗೆ ಈಗಗಲೇ ಪುರಸಭೆಯ ಆರೋಗ್ಯಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದರೂ ಸ್ವಚ್ಚತೆಗಾಗಿ ಂಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಮನೆಯಲ್ಲಿ ವಾಸಿಸುವುದೇ ಹಿಂಸೆಯಾಗುತ್ತಿದ್ದು ಅನಾರೋಗ್ಯದ ಭೀತಿಯೂ ಈ ಪರಿಸರದ ನಿವಾಸಿಗಳನ್ನು ಕಾಡಲಾರಂಭಿಸಿದೆ. ಕನರ್ಾಟಕ ಪುರಸಭೆ ಅಧಿನಿಯಮದ 1964 ರ ನಿಯಮದ ಪ್ರಕಾರ ಸಾರ್ವಜನಿಕ ಪ್ರದೇಶ, ಬೀದಿ ಅಥವಾ ಬಹಿರಂಗ ಜಾಗದಲ್ಲಿ ಶೌಚ ತ್ಯಾಜ್ಯ ಬಸಿದು ಹೋಗುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದರೂ ಏಳು ದಿವಸದಲ್ಲಿ ಬಹಿರಂಗ ಸ್ಥಳದಲ್ಲಿ ಶೌಚ ಹರಿಯುವುದನ್ನು ಸ್ವಚ್ಚಗೊಳಿಸಿಕೊಡುವುದಾಗಿ ಲಿಖಿತ ಭರವಸೆ ನೀಡಿರುವ ಪುರಸಭೆ ನಿರ್ಲಕ್ಷ ತೋರುತ್ತಿರುವ ಬಗ್ಗೆ ದೂರುದಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
