ಬಂಟ್ವಾಳ: ಎನ್ಟಿಎಸ್ಈ ಮತ್ತು ಎನ್ಎಂಎಂಎಸ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ತರಬೇತಿ ಕಾಯರ್ಾಗಾರ ಬಂಟ್ವಾಳ ತಾಲೂಕಿನ ವಗ್ಗದ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರದಿಂದ ಆರಂಭಗೊಂಡಿದೆ.
ದ.ಕ.ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿವರ್ಾಹಣಾದಿಕಾರಿ ತುಳಸಿ ಮದ್ದಿನೇನಿಯವರ ಆಶಯದಂತೆ ಸಕರ್ಾರಿ ಶಾಲೆಯ ವಿದ್ಯಾಥರ್ಿಗಳು ಐಎಎಸ್ನಂತಹ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶಕ್ತರಾಗುವಂತೆ ದ.ಕ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ತರಬೇತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಬಂಟ್ವಾಳ ತಾಲೂಕಿನ ಎಲ್ಲಾ ಸಕರ್ಾರಿ ಶಾಲೆಯ ಆಸಕ್ತ ವಿದ್ಯಾಥರ್ಿಗಳಿಗೆ ತರಬೇತಿ ನಡೆಸಲಾಗುತ್ತಿದೆ.
ಅ.6 ರಂದು ತರಬೇತಿ ಕಾರ್ಯಗಾರ ಆರಂಭಗೊಂಡಿದ್ದು ಅ.19ರವರೆಗೆ 15 ದಿನಗಳ ಕಾಲ ತರಬೇತಿ ನಡೆಯಲಿದೆ. ಶಿಕ್ಷಣ ಇಲಾಖೆಯಿಂದ ನಿಯೋಜಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳು ವಿದ್ಯಾಥರ್ಿಗಳಿಗೆ ಈ ತರಬೇತಿ ನೀಡುತ್ತಾರೆ. ಒಟ್ಟು 241 ವಿದ್ಯಾಥರ್ಿಗಳು ತರಬೇತಿಗೆ ಹಾಜರಾಗಿದ್ದು ಎಂಟನೇ ತರಗತಿಯ 223 ಮಂದಿ ವಿದ್ಯಾಥರ್ಿಗಳು ಎನ್ಎಂಎಂಎಸ್ ಹಾಗೂ ಎಸ್ಎಸ್ಎಲ್ಸಿಯ 18 ಮಂದಿ ವಿದ್ಯಾಥರ್ಿಗಳು ಎನ್ಟಿಎಸ್ಈ ತರಬೇತಿ ಪಡೆಯಲಿದ್ದಾರೆ. ಈ ಪೈಕಿ 149 ಬಾಲಕಿಯರು ಹಾಗೂ 92 ಬಾಲಕರಿದ್ದು 15 ದಿನಗಳ ಕಾಲ ಉಚಿತ ಊಟ ಹಾಗೂ ವಸತಿಯನ್ನು ಒದಗಿಸಲಾಗಿದೆ.
