ಎಳ್ಳಾರೆ: ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದಲ್ಲಿ ಕೊರೊನ ಮಾದರಿಯ ಹೂವು ಕಂಡು ಬಂದಿದೆ. ಇದೇನಿದು ವಿಶೇಷ ಅನ್ನಿಸುತ್ತಿದೆಯೇ… ವಿಚಿತ್ರ ಎನಿಸಿದರೂ ಇದು ನಿಜ. ಕುಕ್ಕುಜೆಯ ಛಾಯಾಗ್ರಾಹಕ ಅಶೋಕ್ ಕರ್ಕೇರ ಅವರು ಪ್ರಕೃತಿಯ ಸೊಬಗನ್ನು ಕ್ಯಾಮೆರಾದಿಂದ ಕ್ಲಿಕ್ಕಿಸಿಕೊಂಡು ಹೊಳೆಯ ಬದಿಯಲ್ಲಿ ವಿಹರಿಸುತ್ತಿದ್ದಾಗ ಇವರಿಗೆ ಕೊರೊನ ಮಾದರಿಯ ಹೂವು ಕಂಡು ಬಂದಿದೆ.
ಈ ಹೂವು ಇಲ್ಲದಿದ್ದರೆ ಯಾರ ಕಣ್ಣಿಗೂ ಬೀಳುತ್ತಿರಲಿಲ್ಲವೇನೋ.. ಆದರೆ ಈ ಕೊರೊನ ವೈರಸ್ ಸುದ್ದಿ ಟಿವಿಯಲ್ಲಿ ನೋಡಿ ಕೇಳಿ ಜನರಿಗೆ ಕೊರೊನ ವೈರಸ್ ನ ಪ್ರತಿರೂಪವು ಚಿರಪರಿಚಿತವಾಗಿಬಿಟ್ಟಿದೆ. ಈ ಹೂವನ್ನು ತುಳು ಭಾಷೆಯಲ್ಲಿ ನೀರ್ ಪೆಜ (ನೀರು ಹೆಬ್ಬಲಸು)ಎಂದು ಕರೆಯುತ್ತಾರೆ.
ಪ್ರಕೃತಿಯಲ್ಲಿ ನಾವು ಕಾಣದ ಹಲವಾರು ವಿಚಾರಗಳಿರುತ್ತವೆ. ಆದರೆ ಇದರ ಬಗ್ಗೆ ತಿಳಿದುಕೊಳ್ಳಲು ಈ ಲಾಕ್ ಡೌನ್ ಒಂದು ಸೂಕ್ತ ಸಮಯ. ಆದ್ದರಿಂದ ಸ್ನೇಹಿತರೇ, ಮನೆಯಲ್ಲಿ ಕೇವಲ ಟಿವಿ,ಮೊಬೈಲ್ ಜೊತೆ ಕಾಲ ಕಳೆಯುವುದಕ್ಕಿಂತ ಪ್ರಕೃತಿಯ ಸೊಬಗನ್ನು ಸವಿಯೋಣ.
✍️ದೀಪಕ್ ಕಾಮತ್ ಎಳ್ಳಾರೆ.
