ಕಾರ್ಕಳ : ಕೊರೊನಾ ಎಂಬ ಮಹಾಮಾರಿಯು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿರುವ ಈ ಸಂಧರ್ಭದಲ್ಲಿ ಕೆಲಸವಿಲ್ಲದೆ ಕಂಗಾಲಾಗಿರುವ ವಿಶ್ವಕರ್ಮ ಸಮುದಾಯದ ಚಿನ್ನ ಬೆಳ್ಳಿ ಕೆಲಸಗಾರರ ಸಹಾಯಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನೀಲ್ ಕುಮಾರ್ ರವರು ಧಾವಿಸಿದ್ದಾರೆ.
ಇಂದು ದಿನಾಂಕ 08-05-2020 ರಂದು ಕಾರ್ಕಳ ತಾಲೂಕಿನ ಸುಮಾರು 300 ಕ್ಕೂ ಅಧಿಕ ಚಿನ್ನ ಹಾಗೂ ಬೆಳ್ಳಿ ಕೆಲಸಗಾರರ ಕುಟುಂಬಗಳಿಗೆ ಆಹಾರ ಕಿಟ್ ಅಕ್ಕಿಯನ್ನು ಶಾಸಕ ವಿ ಸುನೀಲ್ ಕುಮಾರ್ ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪ್ರಧಾನಕಾರ್ಯದರ್ಶಿ ನವೀನ್ ನಾಯಕ್ , ಬಿಜೆಪಿ ನಗರ ಅಧ್ಯಕ್ಷ ಅನಂತಕೃಷ್ಣ ಶೆಣೈ , ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
