ತುಂಬೆ ಯಲ್ಲಿ ಅವಶ್ಯ ದಿನ ಬಳಕೆ ವಸ್ತುಗಳ ವಿತರಣೆ
ಫರಂಗಿಪೇಟೆ : ತುಂಬೆ ಗ್ರಾಮ ದಲ್ಲಿ ಲಾಕ್ ಡೌನ್ ನಿಂದ ಸಂಕಷ್ಟ ಕ್ಕೆ ಒಳಗಾದ ಕುಟುಂಬಗಳಿಗೆ ಅವಶ್ಯ ದಿನ ಬಳಕೆ ವಸ್ತುಗಳ ವಿತರಣೆ ಮಾಡಲಾಯಿತು ಸಂಸದ ನಳಿನ್ ಕುಮಾರ್ ಕಟೀಲು ಅವರು ಕೊಡಮಾಡಿದ ಅಕ್ಕಿ ಹಾಗು ಬಿ ಜೆ ಪಿ ಮಂಗಳೂರು ಮಂಡಲ ದ ವತಿಯಿಂದ ಕೊಡಮಾಡಿದ ಆಹಾರ ಕಿಟ್ ಗಳು ಅಲ್ಲದೆ ದಾನಿಗಳಾದ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಜಯ ಪ್ರಕಾಶ್ ತುಂಬೆ , ರಾಘವ ಬಂಗೇರ ಪೆರ್ಲ ಬೈಲ್ ಮುಂತಾದ ಗಣ್ಯರಿಂದ ಸಂಗ್ರಹಿಸಿದ ಸಾಮಗ್ರಿ ಗಳನ್ನು ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಿಸಲಾಯಿತು.
ಈ ಸಂದರ್ಭ ದಲ್ಲಿ ಬಿ ಜೆ ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು , ಬಿ ಜೆ ಪಿ ಮಂಗಳೂರು ಮಂಡಲ ದ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ , ಜಯ ಪ್ರಕಾಶ್ ತುಂಬೆ , ರಾಘವ ಬಂಗೇರ ಪೆರ್ಲ ಬೈಲ್ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಎ ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ , ಕೃಷ್ಣಪ್ಪ ಪೂಜಾರಿ ಕಲ್ಲಡ್ಕ , ಸೋಮಪ್ಪ ಕೋಟ್ಯಾನ್ ತುಂಬೆ , ರಾಮಲ್ ಕಟ್ಟೆ ಬೂತ್ ಅಧ್ಯಕ್ಷರಾದ ಮನೋಜ್ ಮತ್ತಿತರರು ಉಪಸ್ಥಿತರಿದ್ದರು ರಾಮಲ್ ಕಟ್ಟೆ ಬೂತ್ ಅಧ್ಯಕ್ಷರ ಮನೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮ ದಲ್ಲಿಅಕ್ಕಿ ಮತ್ತು ಆಹಾರ ಕಿಟ್ ಗಳನ್ನು ವಿತರಿಸಲಾಯಿತು.