ಕೈಕಂಬ:ಲಾಕ್ ಡೌನ್ ಘೋಷಣೆಯಾದ ದಿನದಿಂದ ಮದ್ಯದಂಗಡಿಗಳು ಮುಚ್ಚಿದ ನಂತರ ಮದ್ಯ ಸಿಗದೇ ಪರದಾಡಿದ್ದ ಜನ ಸೋಮವಾರ ವೈನ್ ಶಾಪ್ ಗಳು ತೆರೆಯುವ ಮುನ್ನವೇ ಮದ್ಯ ಖರೀದಿಸಲು  ಮುಂದೆ ಸರತಿಸಾಲಿನಲ್ಲಿ ನಿಂತಿದ್ದರು. 99afb5fa-dce8-4dfe-a140-88ca6f28ef98
ಬಾರ್ ಗಳು ತೆರೆಯದೆ ಕೇವಲ ವೈನ್ ಶಾಪ್ ಗಳಿಗೆ ಮಾತ್ರ ತೆರೆಯಲು ಅವಕಾಶವಿದ್ದುದರಿಂದ ವೈನ್ ಶಾಪ್ ಗಳ ಮುಂದೆ ಜನರ ಸಾಲುಗಳು ಕಂಡು ಬಂದವು. ಕೆಲವೇ ಪ್ರದೇಶಗಳಲ್ಲಿ ಮಾತ್ರ ವೈನ್ ಶಾಪ್ ಗಳಿರುವ ಕಾರಣದಿಂದ ವೈನ್ ಶಾಪ್ ಗಳು ಇಲ್ಲದ ಊರಿನ ಜನರೂ ಇಲ್ಲಿಗೆ ಬಂದಿದ್ದರು, ದೂರದ ಹೆಚ್ಚಿನವರು ವಾಹನಗಳಲ್ಲಿ ಬಂದಿದ್ದರೆ, ವಾಹನ ಇಲ್ಲದವರು ಕಿಲೋಮೀಟರ್ ದೂರದವರೆಗೆ ನಡೆದುಕೊಂಡು ಹೋಗಿ ಮದ್ಯ ಖರೀದಿಸಿ ನೂರು ಮೀಟರ್ ಓಟ ದಲ್ಲಿ ಪದಕ ಗೆದ್ದವರಂತೆ ಖುಷಿ ಪಟ್ಟರು.
ಹೆಚ್ಚಿನ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡಿದ್ದರೆ ಇನ್ನು ಕೆಲವು ಕಡೆ ಒಮ್ಮೆ ಮದ್ಯ ಸಿಕ್ಕಿದರೆ ಸಾಕು ಎಂಬ ಅವಸರದಲ್ಲಿ ಅಂತರ ಮರೆತೇ ಹೋಗಿತ್ತು.ಬಜಪೆ ಪೊಲೀಸರು ಆಗಾಗ ಭೇಟಿ ಕೊಟ್ಟು  ವೈನ್ ಶಾಪ್ ಗಳ ಬಳಿ ಅಂತರ ಕಾಯ್ದು ಕೊಳ್ಳುವಂತೆ  ಸೂಚನೆ ನೀಡುತ್ತಿದ್ದರು. ಅಬಕಾರಿ ಅಧಿಕಾರಿಗಳ ತಂಡ ಕೂಡ ನಿಗಾ ವಹಿಸಿತ್ತು.
ವೈನ್ ಶಾಪ್ ಗಳ ಮುಂದೆ ಬಿಸಿಲನ್ನೂ ಲೆಕ್ಕಿಸದೆ ಮದ್ಯಪ್ರಿಯರು ಮದ್ಯಕ್ಕಾಗಿ ಸಾಲು ನಿಂತಿದ್ದರೆ, ರೇಷನ್ ಅಂಗಡಿಗಳ ಮುಂದೆ  ತಿಂಗಳ ರೇಷನ್ ಗಾಗಿ ಮಹಿಳೆಯರು ಸಾಲಲ್ಲಿ ನಿಂತಿರುವುದು ಕಂಡು ಬಂತು.

By suddi9

Leave a Reply

Your email address will not be published. Required fields are marked *