ಕೈಕಂಬ:  ಜಗತ್ತನ್ನು ಕಾಡುತ್ತಿರುವ ಕೋವಿಡ್ – 19  ಎಂಬ ಹೆಮ್ಮಾರಿಯು ಜನರ ಜೀವನ ಅಸ್ತವ್ಯಸ್ತಗೊಳಿಸಿದ್ದು,  ಬೇರೆ ರಾಜ್ಯ, ಜಿಲ್ಲೆಗಳಿಂದ  ಕೆಲಸಕ್ಕಾಗಿ ಬಂದು, ಬಜಪೆ ಕಿನ್ನಿಪದವು, ಕೊಳಂಬೆ, ಶಾಂತಿ ಗುಡ್ಡೆ, ಮತ್ತು ಕೊಂಚಾರು ಮುಂತಾದ ಪ್ರದೇಶಗಳಲ್ಲಿ  ನೆಲೆಸಿರುವ ಕಾರ್ಮಿಕರಿಗೆ ದಿನಸಿ ವಿತರಣೆ.IMG-20200502-WA0018

ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಊಟಕ್ಕೆ ಪರದಾಡುತ್ತಿರುವುದನ್ನು ಗಮನಿಸಿದ ಬಜಪೆ ಠಾಣೆಯ ಕಾನ್ಸ್ಟೇಬಲ್  ದೇವಪ್ಪ ಹೊಸಮನಿ ಅವರು ತಮ್ಮ ವೇತನದಲ್ಲಿ ಸ್ವತಃ ಕಾರ್ಮಿಕರ  ಮನೆಗೆ  ತೆರಳಿ ಸುಮಾರು 100  ಕುಟುಂಬಗಳಿಗೆ  ಆಹಾರ ಧಾನ್ಯಗಳ ಕಿಟ್ ಗಳನ್ನು  ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಸಮಾಜ ಮುಖಿ ಕಾರ್ಯ ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಗಿದೆ. 20200503_100731 (1)

By suddi9

Leave a Reply

Your email address will not be published. Required fields are marked *