Published On: Mon, Apr 27th, 2020

ದುಬಾಯಿ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್‍ಆರ್ ಐ ಫೋರಂ ಸಕ್ರೀಯ ಅನಿವಾಸಿ ಭಾರತೀಯರ ಸ್ಪಂದನೆಗೂ ಬದ್ಧ-ಪ್ರವೀಣ್‍ಶೆಟ್ಟಿ ವಕ್ವಾಡಿ

ಮುಂಬಯಿ : ಭೌಗೋಳಿಕವಾಗಿ ತಾಂಡವವಾಡಿದ ಕೋವಿಡ್-19 ಸಾಂಕ್ರ್ರಾಮಿಕ ಮಹಾಮಾರಿ ಕೊರೋನಾದಿಂದ ಜನತೆ ತತ್ತರಿಸಿದ್ದು ಇದೀಗ ಈ ಮಹಾಮಾರಿ ಸಮಷ್ಟಿಯ ಸಮಗ್ರ ಜನಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ. ವಿಶ್ವದಾದ್ಯಂತ ಲಾಕ್‍ಡೌನ್‍ನಿಂದ ಜಾಗತಿಕವಾಗಿ ವ್ಯಾಪಾರ ವಾಹಿವಟು ಸ್ತಬ್ದವಾಗಿದ್ದು ಆಥಿರ್üಕ ಶಕ್ತಿಯೇ ಕುಸಿದಿದೆ. ಕಣ್ಣಿಗೆ ಕಾಣದ ಸೂಕ್ಷ್ಮಣುಯೊಂದು ತನ್ನ ತಾಕತ್ತನ್ನೆ ಮೆರೆದು ಭೂಮಂಡಲವನ್ನೇ ಧರೆಗುರುಳಿಸಿದೆ. ಈ ಸಂಧಿಗ್ಧ ಸಮಯದಲ್ಲಿ ದುಬಾಯಿ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್‍ಆರ್‍ಐ ಫೋರಂ-ಯುಎಇ ಸಕ್ರೀಯವಾಗಿದ್ದು, ಯುಎಇ ರಾಷ್ಟ್ರದ ಕಾಯ್ದೆಕಾನೂನುಗಳನ್ನು ಪಾಲಿಸುತ್ತಾ ಇಲ್ಲಿ ನೆಲೆಯಾದ ಕರ್ನಾಟಕದ ಜನತೆಯ ಆರೋಗ್ಯ, ಆಹಾರ, ವೀಸಾ ಇನ್ನಿತರ ಅತ್ಯವಶ್ಯಕ ಸೇವೆಯಲ್ಲಿ ಫೋರಂ ಹಗಲಿರುಳು ಶ್ರಮಿಸುತ್ತಿದೆ.MD Profile Final For Printing.cdr

ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರಕಾರ ನಮ್ಮನ್ನು ಪ್ರೋತ್ಸಾಹಿಸಿದರೆ ಅನಿವಾಸಿ ಭಾರತೀಯ ದುಬಾಯಿ ವಾಸಿಗಳನ್ನು ಕರುನಾಡಿಗೆ ಕಳುಹಿಸಿ ಕೊಡುವಲ್ಲಿ ತುಂಬಾ ಅನುಕೂಲಕರವಾಗಲ್ಲದು. ಶಾಶ್ವತವಾಗಿ ಉಳಿಯುವ ಉದ್ದೇಶ ಹೊಂದಿರದವರು, ಅಸ್ವಸ್ಥರು, ವಿದ್ಯಾರ್ಥಿ ವೀಸಾವುಳ್ಳ ಮತ್ತು ಸಂದರ್ಶಕ ಭೇಟಿಗೈದ ಕನ್ನಡಿಗರಲ್ಲಿ ತಮ್ಮತಮ್ಮ ತವರೂರು ಸೇರುವ ಆತುರ ಹೆಚ್ಚಿದ್ದು ವಿಮಾನಯಾನಕ್ಕೆ ಅವಕಾಶ ಒದಗಿಸಿದ್ದಲ್ಲಿ ಇವರನ್ನು ಮೊದಲಾಗಿ ಇಲ್ಲಿಂದ ಕರುನಾಡಿಗೆ ಕಳುಹಿಸಿ ಕೊಡುವ ಪ್ರಯತ್ನ ನಡೆಸಲಿದ್ದೇವೆ ಎಂದು ದುಬಾಯಿ ಇಲ್ಲಿನ ಪ್ರತಿಷ್ಠಿತ ಹೊಟೇಲು ಉದ್ಯಮಿ, ಫರ್ಚೂನ್ ಸಮೂಹದ ಆಡಳಿತ ನಿರ್ದೇಶಕ, ಉಡುಪಿ ಜಿಲ್ಲೆಯ ಕುಂದಾಪುರ ಬಾರಕೂರು ವಕ್ವಾಡಿ ಮೂಲತಃ ಕರ್ನಾಟಕ ಎನ್‍ಆರ್‍ಐ  ಫೋರಂ-ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ) ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದರು.

ನಮ್ಮವರು ಅವರ ಅಗತ್ಯಗಳನ್ನು ನಮ್ಮ ಗಮನಕ್ಕೆ ತರುವುದೂ ಅಷ್ಟೇ ಮುಖ್ಯವಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ, ರಾಜ್ಯದ ಮುಖ್ಯಮಂತ್ರಿ, ಸಚಿವರು, ವಿವಿಧ ಜಿಲ್ಲಾಡಳಿತಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದು ಇವೆಲ್ಲರ ಸಂಪರ್ಕದ ಮೇರೆಗೆ ಇಲ್ಲಿನ ಕರುನಾಡ ಜನತೆಯ ಸ್ಪಂದನೆಗೆ ಕರ್ನಾಟಕ ಎನ್‍ಆರ್‍ಐ ಫೋರಂ-ಯುಎಇ ಕ್ಷಣಕ್ಷಣಕ್ಕೂ ಕಾರ್ಯನಿರತವಾಗಿದೆ. ಅದಕ್ಕಾಗಿ ಕನ್ನಡಿಗಸ್ ಹೆಲ್ಪ್‍ಲೈನ್‍ನನ್ನೂ ಬಿಡುಗಡೆ ಗೊಳಿಸಿದೆ ಆಹಾರ ವೈದ್ಯಕೀಯ, ಸಲಹೆ, ತುರ್ತು ಸಮನ್ವಯತೆ, ಕಾನೂನು ನೆರವು ಬಗ್ಗೆಯೂ ಸ್ಪಂದಿಸುತ್ತಿದ್ದು ಈ ಎಲ್ಲಾ ಸೇವೆಗೆ ನಾವು ಬದ್ಧರಾಗಿದ್ದೇವೆ ಎಂದೂ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ.
ನಮ್ಮಲ್ಲಿನ ಕೋಟ್ಯಾಂತರ ಜನರು ಬದುಕನ್ನು ಕಟ್ಟುವ ಉದ್ದೇಶದೊಂದಿಗೆ ಉದ್ಯೋಗವನ್ನರಸಿ ಜಾಗತಿಕವಾಗಿ ವಲಸೆ ಹೋಗಿದ್ದಿದೆ. ಇಂತಹ ಭಾರತೀಯರು ಇದೀಗ ವಿವಿಧ ರಾಷ್ಟ್ರಗಳಲ್ಲಿ ಇದ್ದುಕೊಂಡು ತಮ್ಮ ಮುಂದಿನ ಭವಿಷ್ಯದ ಲೆಕ್ಕಾಚಾರ ಎಣಿಸಿಕೊಳ್ಳುವಂತಾಗಿದೆ. ಭಾರತದ ತಾಯ್ನಾಡಿನಿಂದ ಆತಿಥೇಯ ದೇಶಗಳಿಗೆ ಉದ್ಯೋಗ ಅಥವಾ ಉದ್ಯಮ ಅರಸುವುದರೂಂದಿಗೆ ವಲಸೆ ಕೆಲಸಗಾರರಾಗಿ, ವಿದೇಶಿ ಕಾರ್ಮಿಕ, ಅತಿಥಿ ಕೆಲಸಗಾರರಾಗಿ, ವಿಶೇಷ ಪರವಾನಗಿಯಲ್ಲಿ ಸಂದರ್ಶಕ ಭೇಟಿ (ವಿಸಿಟಿಂಗ್ ವೀಸಾ), ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೀಸಾ ಹೊಂದಿ ಆಶ್ರಯ ಪಡೆದವರೂ ಅನೇಕರಿದ್ದಾರೆ. ಅದರಲ್ಲೂ ಗಲ್ಫ್‍ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯರಾಗಿ ಉಳಿದು ಕೊಂಡಿರುವರು ಏಳು ರಾಜಪ್ರಭುತ್ವದ ಎಮಿರೇಟ್ಸ್‍ಗಳ ಒಕ್ಕೂಟವಾದ ದುಬಾಯಿನಲ್ಲೇ (ಯುನೈಟೆಡ್ ಅರಬ್ ಎಮಿರೇಟ್ಸ್) ಭಾರತೀಯರ ಪೈಕಿ ಕರ್ನಾಟಕ ರಾಜ್ಯದ ಜನತೆ ಬಹಳಷ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಯಾವ ರೀತಿಯಲ್ಲಿ ಪರಿಣಾಮ ಬೀರಬಲ್ಲದು ಅನ್ನೊವುದೇ ಇವರೆಲ್ಲರಿಗೆ ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ ಎಂದೂ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಫೋರಂನ ಉಪಾಧ್ಯಕ್ಷ ಜೋಸೆಫ್ ಮಥಾಯಸ್, ಪ್ರಧಾನ ಕಾರ್ಯದರ್ಶಿ ಪ್ರಬಾಕರ್ ಅಂಬಲತರೆ, ಜೊತೆ ಕಾರ್ಯದರ್ಶಿ ಎಂ.ಇ ಮುಳೂರು, ಜೊತೆ ಕೋಶಾಧಿಕಾರಿ ದಯಾ ಕಿರೋಡಿಯನ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಪ್ರವೃತ್ತರಾಗಿದ್ದಾರೆ.

ಅಗತ್ಯ ಸೇವೆಗಾಗಿ ದುಬಾಯಿನಲ್ಲಿ ದಯಾ ಕಿರೋಡಿಯನ್ (0507855649), ರೋನಾಲ್ಡ್ ಮಾರ್ಟಿಸ್ (0504307973), ಹರೀಶ್ ಶೇರಿಗಾರ್ (0506253143), ಆಶ್ರಫ್ ಕೆಎಂ. (0505379817), ಯೂಸುಫ್ ಬೆರ್ಮವೆರ್ (0504667837), ಈದಾಯತ್ತ್ ಅಡ್ಡೂರು (0551118555), ನವೀದ್ ಮಾಗುಂಡಿ (0503728595), ಸುನೀಲ್ ರಾಜ್ (0569831111), ಶಾರ್ಜಾದಲ್ಲಿ ಚಂದ್ರು ಲಿಂಗದಳ್ಳಿ (0506883276), ಇಮ್ರಾನ್ ಖಾನ್ (0529214783), ಸಯ್ಯದ್ ಅಫ್ಜಲ್ ಎಸ್.ಎಂ (0509485368), ಅಜ್ಮಾನ್‍ನಲ್ಲಿ ಯಶ್ ಕರ್ಕೇರ (0561195007), ನೋವೆಲ್ ಅಲ್ಮೇಡಾ (0555878692), ಅಬುದಾಭಿಯಲ್ಲಿ ಸೀರಾಜ್ ಪರ್ಲಡ್ಕ (0505786560), ಜೋನ್ಸಾನ್ ಮಾರ್ಟಿಸ್ (0567557672), ರಾಸ್‍ಆಲ್ ಖೈಮಾ ಇಲ್ಲಿ ಅಲ್ತಾಫ್ ಹೌಸೈನ್ (0558694287) ಸೇವೆಯಲ್ಲಿದ್ದು ಕನ್ನಡಿಗರು ತಮ್ಮ ಅಗತ್ಯಗಳಿಗಾಗಿ ಮಾತ್ರ ಇವರನ್ನು ಅಥವಾ ಇ-ಮೇಯ್ಲ್  kannadigashelpline@gmail.com (ಪ್ರವೀಣ್ ಶೆಟ್ಟಿ) ಮೂಲಕ ಸಂಪರ್ಕಿಸುವಂತೆ ಈ ಮೂಲಕ ಕರ್ನಾಟಕ ಎನ್‍ಆರ್‍ಐ ಫೋರಂ-ಯುಎಇ ತಿಳಿಸಿದೆ.

 ವರದಿ : ರೋನ್ಸ್ ಬಂಟ್ವಾಳ್

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter