Published On: Fri, Apr 24th, 2020

ಹೊಸ ಅಮೆಜಾನ್ ಒರಿಜಿನಲ್ ಸೀರೀಸ್ ಪಾತಾಲ್ ಲೋಕ್‍ನ ಆರಂಭ ದಿನಾಂಕವನ್ನು ಘೋಷಿಸಿದ ಅಮೆಜಾನ್ ಪ್ರೈಮ್ ವೀಡಿಯೋ

ಅಮೆಜಾನ್ ಪ್ರೈಮ್ ವೀಡಿಯೋ ಇಂದು ಹೊಸ ಅಮೆಜಾನ್ ಒರಿಜಿನಲ್ ಸೀರೀಸ್ ಪಾತಾಲ್ ಲೋಕ್‍ನ ಲೋಗೋವನ್ನು ಅನಾವರಣಗೊಳಿಸಿ ಆರಂಭ ದಿನಾಂಕವನ್ನು ಘೋಷಿಸಿದ ದಿನ ಭಾರತ,  ಏಪ್ರಿಲ್ 24, 2020 –. ಕ್ಲೀನ್ ಸ್ಲೇಟ್ ಫಿಲಮ್ಸ್ ನಿರ್ಮಿಸಿರುವ 9 ಭಾಗಗಳ ಈ ಥ್ರಿಲ್ಲರ್ ನಾಟಕಾಂಕವು ನಿರ್ಮಾಪಕಿಯಾಗಿ ಸುಪ್ರಸಿದ್ಧ ನಟಿ ಅನುಷ್ಕಾ ಶರ್ಮಾ ಅವರ ಡಿಜಿಟಲ್ ಪ್ರಥಮ ಪ್ರವೇಶವನ್ನು ಸೂಚಿಸುತ್ತದೆ.Paatal-Lok

ಈ ಕೌತುಕಮಯವಾಗಿ ಆ್ಯನಿಮೇಟ್ ಮಾಡಲಾದ ವೀಡಿಯೋ ಬಿರುಗಾಳಿ ಬರುವ ಮುನ್ನಿನ ಪ್ರಶಾಂತತೆಯನ್ನು ತೋರಿಸುತ್ತದೆ. ಅಂದರೆ, ಮೇಲ್ನೋಟಕ್ಕೆ ಶಾಂತವಾಗಿದ್ದರೂ ಒಳಗೆ ಪ್ರಬಲವಾದ ಕತ್ತಲಿನ, ಅಪಾಯಕಾರೀ ಗರ್ಭದೊಳಗಿರುವ ಪಾತಾಳ ಲೋಕದ ಗವಾಕ್ಷವನ್ನು ತೆರೆದಿಡುತ್ತದೆ.

ಸೆರೆಹಿಡಿದಿಡುವ ಕಥಾನಕವು, ಮನುಷ್ಯತ್ವದ ಕರಾಳಭಾಗದ ಮೇಲೆ ಬೆಳಕು ಚೆಲ್ಲುತ್ತದೆ. ನಿಗೂಢತೆ, ಕೌತುಕತೆ ಮತ್ತು ನಾಟಕೀಯತೆಯಿಂದ ಕೂಡಿರುವ  ಅಮೆಜಾನ್ ಪ್ರೈಮ್ ವೀಡಿಯೋದ ಇತ್ತೀಚಿನ ಒರಿಜಿನಲ್ ಅನೈತಿಕತೆಯ ಕತ್ತಲಹಾದಿಯನ್ನು ಶೋಧಿಸುತ್ತದೆ. ಸ್ವರ್ಗಲೋಕ, ಭೂಲೋಕ, ಮತ್ತು ಪಾತಾಳ ಲೋಕದಂತಹ ಪುರಾತನ ಲೋಕಗಳಿಂದ ಪ್ರೇರಿತವಾದ ಈ ನವಯುಗದ ಸೀರೀಸ್ ಪ್ರಜಾತಂತ್ರದ ನಾಲ್ಕು ಕ್ಷೇತ್ರಗಳೊಳಗಿನ ಅನ್ಯೋನ್ಯತೆಯ ಮೇಲೆ ಗಮನಕೇಂದ್ರೀಕರಿಸುತ್ತದೆ.

ಈ ಥ್ರಿಲ್ಲರ್ ಮೇ 15ರಂದು ಆರಂಭವಾಗುತ್ತದೆ.

ವೀಡೀಯೋವನ್ನು ಇಲ್ಲಿ ನೋಡಿ:https://youtu.be/iuXDYzG3uMM

ಪಾತಾಲ್ ಲೋಕ್, ಪ್ರಶಸ್ತಿ ವಿಜೇತ ಅಮೇರಿಕನ್ ಒರಿಜಿನಲ್ ಸರಣಿಯಾದ ದಿ ಫಾಮಿಲಿ ಮ್ಯಾನ್, ಮಿರ್ಜಾಪುರ, ಇನ್ಸೈಡ್ ಎಡ್ಜ್, ಕಾಮಿಕ್ಸ್ತಾನ್, ಮೇಡ್ ಇನ್ ಹೆವೆನ್ ಮತ್ತು ಟಾಮ್ ಕ್ಲಾನ್ಸಿ ಅವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸಲ್ ಒಳಗೊಂಡಂತೆ ಜಾಗತಿಕವಾಗಿ ಮೆಚ್ಚುಗೆ ಪಡೆದ ಹಾಗು ಪ್ರಶಸ್ತಿ ವಿಜೇತ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್ ಇರುವ ಪ್ರೈಮ್ ವೀಡಿಯೋ ಕ್ಯಾಟಲಾಗ್‍ನಲ್ಲಿರುವ ಸಾವಿರಾರು ಹಾಲಿವುಡ್ ಹಾಗು ಬಾಲಿವುಡ್ ಟಿವಿ ಶೋಗಳು ಹಾಗು ಚಲನಚಿತ್ರಗಳನ್ನು ಸೇರಿಕೊಳ್ಳಲಿದ್ದು ಇವೆಲ್ಲವೂ ಜಾಹೀರಾತು ರಹಿತ ವಿಶ್ವಮಟ್ಟದ ಗ್ರಾಹಕ ಅನುಭವದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಕಾರ್ಯಕ್ರಮಗಳು ಲಭ್ಯವಿದೆ.

ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆ್ಯಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ  ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು. ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಪ್ರೈಮ್ ಸದಸ್ಯರು ಪಾತಾಲ್ ಲೋಕ್‍ನ ಎಲ್ಲಾ ಎಪಿಸೋಡ್‍ಗಳನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‍ಗಳಿಗೆ ಡೌನ್‍ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‍ಲೈನ್‍ನಲ್ಲಿ ವೀಕ್ಷಿಸಬಹುದು. ಪ್ರೈಮ್ ವೀಡಿಯೋ, ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ರೂ.999 ವಾರ್ಷಿಕ ಅಥವಾ ರೂ. 129 ಮಾಸಿಕ ದರದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು ತಿತಿತಿ.ಚಿmಚಿzoಟಿ.iಟಿ/ಠಿಡಿimeಗೆ ಭೇಟಿ ನೀಡಿ 30-ದಿನಗಳ ಉಚಿತ ಟ್ರಯಲ್‍ಗೆ ಚಂದಾ ಪಡೆದುಕೊಳ್ಳಬಹುದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter