Published On: Tue, May 12th, 2020

*ಸಮೃದ್ಧ ಸ್ವಾವಲಂಬಿ ಭಾರತಕ್ಕೆ ಕೊರೋನಾ ಅವಕಾಶ* 

ದೆಹಲಿ:ನಮ್ಮ ಪೂರೈಕೆ ವ್ಯವಸ್ಥೆಯನ್ನು ನಾವಿಂದು ಸದೃಢಗೊಳಿಸಬೇಕಾಗಿದೆ ಈ ನಿಟ್ಟಿನಲ್ಲಿ ದೇಶಕ್ಕೆ ಹೊಸ ದಿಕ್ಕನ್ನು ತೋರಲು ಪ್ರಧಾನಿಯವರು ಹೊಸ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.- 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಇದಾಗಿದ್ದು ಇದು ನಮ್ಮ ಜಿಡಿಪಿಯ 10 ಪ್ರತಿಶತವಾಗಿದೆ. ನಮ್ಮ ರಾಜ್ಯದ ಬಜೆಟ್ ನ 10 ಭಾಗ ದೊಡ್ಡದಾಗಿದೆ. ನಮ್ಮಆತ್ಮ ನಿರ್ಭರ ಭಾರತ ಸಂಕಲ್ಪವನ್ನು ಸಾಕಾರಗೊಳಿಸಲು ಈ ಆರ್ಥಿಕ ಪ್ಯಾಕೇಜ್ ಖಂಡಿತವಾಗಿಯೂ ಸಹಕಾರಿಯಾಗಲಿದೆ. ನಮ್ಮ ಗ್ರಾಮೋದ್ಯೋಗ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳನ್ನೂ ಸೇರಿದಂತೆ ಎಲ್ಲಾ ಉದ್ಯಮ ವಲಯಗಳಿಗೆ, ಶ್ರಮಜೀವಿಗಳಿಗೆ ಮತ್ತು ರೈತ ವರ್ಗಕ್ಕೆ ಬಲ ತುಂಬಲಿದೆ.ಮುಂದಿನ ದಿನಗಳಲ್ಲಿ ಕೇಂದ್ರ ವಿತ್ತ ಸಚಿವರು ಈ ಪ್ಯಾಕೇಜ್ ನ ವಿವರಗಳನ್ನು ನಮ್ಮ ಮುಂದೆ ಇಡಲಿದ್ದಾರೆ.download
ಎಲ್ಲಾ ಸರಕಾರಿ ಯಂತ್ರಗಳೂ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಜನಧನ್, ಆಧಾರ್ ಆಧಾರಿತ ವ್ಯವಸ್ಥೆ ನಮ್ಮ ದೇಶದ ಕಟ್ಟಕಡೆಯ ವ್ಯಕ್ತಿಯ ಬಳಿಗೆ ಸರಕಾರದ ಸೌಲಭ್ಯವನ್ನು ತಲುಪಿಸಿದ ಉದಾಹರಣೆ ನಮ್ಮ ಮುಂದಿದೆ ಈ ಪ್ಯಾಕೇಜ್ ನಮ್ಮ ದೇಶದ ಮೇಕ್ ಇನ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ ಎಂಬುವುದು ಆಥಿ೯ಕ ತಜ್ಜರ ಅಭಿಪ್ರಾಯ’.ಕಣ್ಣಿಗೆ ಕಾಣದ ಈವೈರಸ್ ಒಂದು ವಿಶ್ವವನ್ನೇ ತಲ್ಲಣಗೊಳಿಸಿದೆ ಹಾಗೂ ವಿಶ್ವವೇ ಇದರ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ.21ನೇ ಶತಮಾನ ಭಾರತದ್ದಾಗಿದೆ ಎಂದು ಎಲ್ಲರೂ ನಂಬಿದ್ದಾರೆ ಇದು ನಾವೆಲ್ಲರೂ ಮಾಡಿ ತೋರಿಸಬೇಕುಆತ್ಮ ನಿರ್ಭರ ಭಾರತ ನಮ್ಮೆಲ್ಲರ ಧ್ಯೇಯವಾಗಬೇಕಾಗಿದೆಕೋವಿಡ್ ಸಂಕಟ ಶುರುವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಎನ್ 95 ಮಾಸ್ಕ್ ಗಳು ಕೆಲವು ಸಂಖ್ಯೆಯಲ್ಲಿ ಮಾತ್ರವೇ ಉತ್ಪಾದನೆಯಾಗುತ್ತಿತ್ತು.-ಆದರೆ ಇಂದು ಭಾರತದಲ್ಲಿ ದಿನಂಪ್ರತಿ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದೆ ಇದು ನಮ್ಮ ತಾಕತ್ತು. ತೊಂದರೆಯನ್ನು ಅವಕಾಶವಾಗಿ ಮಾಡಲು ಸಾಧ್ಯವಾಗಿದೆ.
ವಿಶ್ವದಲ್ಲಿ ಇದೀಗ ಆರ್ಥಿಕ ಕೇಂದ್ರೀಕರಣ ವಿಕೇಂದ್ರಿಕೃತಗೊಂಡಿದೆವಸುದೈವ ಕುಟುಂಬ ಎಂಬುದು ನಮ್ಮ ಮೂಲಮಂತ್ರ. ಮತ್ತು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇದು ಸಾಬೀತುಗೊಂಡಿದೆ.ಭಾರತದ ಪ್ರಗತಿ ವಿಶ್ವ ಪ್ರಗತಿಯೊಂದಿಗೆ ಸಹಭಾಗಿತ್ವ ಹೊಂದಿದೆ. ಇದು ಪೋಲಿಯೋ ವಿಚಾರದಲ್ಲಿ, ಅಪೌಷ್ಠಿಕತೆ, ವಿಶ್ವ ಯೋಗ ದಿನ, ಸೌರ ಶಕ್ತಿ ಒಕ್ಕೂಟದ ವಿಚಾರಗಳಲ್ಲಿ ಈ ಅಂಶ ಈಗಾಗಲೇ ಸಾಬೀತುಗೊಂಡಿದೆ.ಪ್ರತೀ ಬಾರಿ ದೇಶ ಸಂಕಷ್ಟ ಒಂದರಿಂಧ ಪಾರಾಗುವ ಯತ್ನದಲ್ಲಿ ವಿಶ್ವವನ್ನೇ ಈ ಸಂಕಷ್ಟದಿಂದ ಪಾರು ಮಾಡಿಯೇ ಮುಂದುವರಿಯುತ್ತದೆ.
– ವಿಶ್ವ ಕಲ್ಯಾಣದ ರಸ್ತೆಯಲ್ಲಿ ನಮ್ಮ ನಿರ್ಧಾರ ಅಚಲವಾಗಬೇಕು.. ಈ ಶತಮಾನದ ಪ್ರಾರಂಭದಲ್ಲಿ ವೈ2ಕೆ ಸಂಕಟ ತಲೆದೋರಿದ್ದಾಗ ಆ ಸಂಕಟದಿಂದ ವಿಶ್ವವನ್ನು ಪಾರು ಮಾಡಿದ್ದು ನಮ್ಮಭಾರತದ ತಂತ್ರಜ್ಞರೇ.ಭೂಕಂಪದ ಲ್ಲಿ ತೊಂದರೆಗೆ ಸಿಲುಕಿದ ಕಛ್ ದೇಶದ ಮುಂದೆ ಹೊಸ ರೂಪದಲ್ಲಿ ಎದ್ದು ನಿಂತಿತು. ಇದು ಭಾರತದ ಸಂಕಲ್ಪ ಶಕ್ತಿಯ ದ್ಯೋತಕವಾಗಿದೆ ಎಂದರೆ ತಪ್ಪಾಗಲಾರದು
ನಮ್ಮ ದೇಶದ ಅತ್ಮ ನಿರ್ಭರತೆ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ: ಅದು ಆರ್ಥಿಕತೆ, ಮೂಲಭೂತ ಸೌಲಭ್ಯ,  ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ, ನಮ್ಮ ಭೌಗೋಳಿಕ ವೈವಿಧ್ಯತೆ ಹಾಗೂ ಬೇಡಿಕೆ ಎಂಬುದೇ ಈ ಐದು ಆಧಾರ ಸ್ತಂಭಗಳಾಗಿವೆ.ಪ್ರಧಾನಿಯವರ ಈ ಐತಿಹಾಸಿಕ ನಿಧಾ೯ರ ದೇಶದ ದಿಕ್ಕನೇ ಬದಲಾಯಿಸಬಹುದಾಗಿದೆ. ಬೇರೆ ದೇಶಗಳಿಗೆ ನಾವು ಅವಲಂಬಿಯಾಗದೆ ನಮ್ಮ ದೇಶದಲ್ಲಿ ವಿವಿಧ ವಸ್ತುಗಳನ್ನು ತಯಾರಿಸಿ ಬೇರೆ ದೇಶಗಳಿಗೆ ಅದನ್ನು ರಫ್ತ ಮಾಡಬೇಕು.ಭವಿಷ್ಯದ ಭಾರತ ನಿಮಾ೯ಣಕ್ಕೆ ಕೊರೊನಾ ಮುನ್ನುಡಿ ಬರೆಯಲಿ .ಮತ್ತೊಮ್ಮೆ ನಮ್ಮ ದೇಶ ವಿಶ್ವ ಗುರುವಾಗಲಿ ರಾಜಕೀಯ ಬಿಟ್ಟು ದೇಶದ ಅಭಿವೃದ್ಧಿಗೆ ಯೋಚಿಸೋಣ. ಬದಲಾಗುವುದು ಈ ದೇಶ ನಿ ಬದಲಾದರೆ ಸರಿಯಾಗುವುದು ಸಮಾಜ  ನೀ ಮೊದಲಾದರೆ ಎಂಬ ಮಾತಿನoತೆ ಬನ್ನಿ ಬದಲಾಗೋಣ.
* *ರಾಘವೇಂದ್ರ ಪ್ರಭು, ಕವಾ೯ಲು*

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter