ಗುರುಪುರ : ಭಾನುವಾರ ಸಂಜೆ ಸುರಿದ ಭಾರೀ ಗಾಳಿಮಳೆಗೆ ಗುರುಪುರ ಮಠದಬೈಲಿಗೆ ಹತ್ತಿರದ ದಾರೂಸಲಾಂ ಜುಮ್ಮಾ ಮಸೀದಿ ಬಳಿ ವಿದ್ಯುತ್ ಕಂಬವೊಂದು ರಸ್ತೆಗೆ ಮುರಿದು ಬಿದ್ದು, ಪರಿಸರದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.
ಬಿರುಗಾಳಿಗೆ ಮಾವಿನ ಮರದ ಬೃಹತ್ ರೆಂಬೆಯೊಂದು ವಿದ್ಯುತ್ ತಂತಿಗೆ ಬಿದ್ದು, ತಂತಿಯೊಂದಿಗೆ ಕಂಬ ಮುದಿರಿದೆ. ಸ್ಥಳೀಯರು ಮತ್ತು ಮೆಸ್ಕಾಂ ಸಿಬ್ಬಂದಿ ರಸ್ತೆಯಿಂದ ಮುರಿದ ಕಂಬ ತೆರವುಗೊಳಿಸಿ ಬಂಡಸಾಲೆಯಿಂದ ಗುರುಪುರ ಕೈಕಂಬಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆ ತೆರೆವು ಮಾಡಿಕೊಟ್ಟರು. ಸದ್ಯ ವಿದ್ಯುತ್ ಸಂಪರ್ಕ ಕಲ್ಪಿಸುವ ದೆಸೆಯಲ್ಲಿ ಮೆಸ್ಕಾಂ ಸಿಬ್ಬಂದಿ ಕಾರ್ಯತತ್ಪರರಾಗಿದ್ದಾರೆ.
