ಕೈಕಂಬ: ಮಕರ ಜ್ಯೋತಿ ಅಯ್ಯಪ್ಪ ಭಕ್ತವೃಂದ ಕೊಲ್ಲೊಟ್ಟು,ಮುತ್ತೂರು ಇದರ ನೇತೃತ್ವದಲ್ಲಿ ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಮಂಗಳೂರು ಉತ್ತರ ಭಾರತೀಯ ಜನತಾ ಪಕ್ಷ ಮತ್ತು ದಾನಿಗಳ ಸಹಕಾರದಿಂದ ಕೊಡಮಾಡಿದ ದಿನಸಿ ವಸ್ತುಗಳ ಕಿಟ್ ಗಳನ್ನು ಆರೋಗ್ಯ ಸಿಬ್ಬಂದಿ ಮತ್ತು ಆಶಾಕಾರ್ಯಕರ್ತೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಸುಮಾರು 280 ಅವಶ್ಯವಿದ್ದ ಕುಟುಂಬಗಳಿಗೆ ಶಾಸಕ ಭರತ್ ಶೆಟ್ಟಿಯವರು ಶುಕ್ರವಾರ ವಿತರಿಸಿದರು. 

ತಾಲೂಕುಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ, ಮುತ್ತೂರು ಪಂ. ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರುಗಳಾದ ತಾರಾನಾಥ್ ಕುಲಾಲ್, ಪ್ರವೀಣ್ ಆಳ್ವ, ಜೆರಾಲ್ಡ್ ಪಿಂಟೋ, ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಗಂಜಿಮಠ ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಜಯಾನಂದ ನಾಯ್ಕ್ ಮೊಗರು, ಕೃಷ್ಣರಾಜ್ ಮಾರ್ಲ, ಅಯ್ಯಪ್ಪ ಭಕ್ತ ವ್ರ0ದ ದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

