ಕಾರ್ಕಾಳ: ಶ್ರೀ ಕ್ಷೇತ್ರ ಕುದ್ರೋಳಿ ವತಿಯಿಂದ ಯುವಸಂಗಮ ಕಾಂತಾವರದ ಸಹಕಾರದಲ್ಲಿ ದಿನಸಿ ಸಾಮಾಗ್ರಿ ವಿತರಣೆಯನ್ನು ಯುವಸಂಗಮ ಕಾಂತಾವರ ತಂಡದ ಸದಸ್ಯರ ಸಹಕಾರದೊಂದಿಗೆ ವಿತರಿಸಲಾಯಿತು. 
ಕರೋನಾ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿಯನ್ನು ಕಾಂತಾವರ ಗ್ರಾಮಕ್ಕೆ ವಿತರಿಸಲು ಯುವಸಂಗಮ ಕಾಂತಾವರ ತಂಡದ ಮನವಿಯ ಮೇರೆಗೆ, ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಸ್ಥಾನವು ಅಕ್ಕಿಯನ್ನು ನೀಡಿದ್ದು, ಇಂದು ಕಾಂತಾವರ ಗ್ರಾಮದ ಅರ್ಹ 82 ಕ್ಕೂ ಅಧಿಕ ಬಡಕುಟುಂಬಗಳಿಗೆ ಯುವಸಂಗಮ ಕಾಂತಾವರ ತಂಡದ ಸದಸ್ಯರ ಸಹಕಾರದೊಂದಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಯುವಸಂಗಮ ಕಾಂತಾವರದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
