ಬಜಪೆ: ಬಜ್ಪೆ ಗ್ರಾಮದ ಕೊಂಚಾರು ಪರಿಸರದಲ್ಲಿರುವ ಬಿಹಾರ, ಒಡಿಸ್ಸಾ ಮತ್ತು ಛತ್ತೀಸ್ ಗಢ ರಾಜ್ಯಗಳ ಸುಮಾರು 150ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರಿಗೆ ಬಜ್ಪೆ ಶಾಂತಿಭವನ ಹೋಟೆಲ್ ಮಾಲಕ ರಾಘವೇಂದ್ರ ಆಚಾರ್ಯರು ಶುಕ್ರವಾರದಿಂದ ಲಾಕ್‍ಡೌನ್ ಅಂತ್ಯದವರೆಗೆ ಪ್ರತಿದಿನ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿದ್ದಾರೆ.
ಆಚಾರ್ಯರ ಸೇವಾ ಮನೋಭಾವಕ್ಕೆ ಬಜ್ಪೆ ಗ್ರಾಮ ಪಂಚಾಯತ್ ಆಡಳಿತ ಕೃತಜ್ಞತೆ ಸಲ್ಲಿಸಿದೆ.
