ಬಜಪೆ: ಏರ್ ಪೋರ್ಟ್ ಟೂರಿಸ್ಟ್ ಮತ್ತು ಟ್ಯಾಕ್ಸಿ ಚಾಲಕ ಮಾಲಕರ ಸಂಘ ಮತ್ತು ಅವರದೇ ಆದ ವಿವಿಧೋದ್ದೆೇಶ ಸಹಕಾರಿ ಸಂಘದ ವತಿಯಿಂದ, ಪ್ರಸಕ್ತ ಕೊರೋನ ವೈರಸಿನ ದೆಸೆಯಿಂದಾಗಿ ವಿಮಾನ ನಿಲ್ದಾಣ ವೂ ಮುಚ್ಚಿದ್ದು, ಬೇರೆ ಯಾವುದೇ ವ್ಯವಹಾರಗಳೂ ಇಲ್ಲದೆ ಬಡ ಚಾಲಕ ಮಾಲಕರ ಸಂಸಾರ ನಿರ್ವಣೆಯ ದುಃಸ್ಥಿತಿ ಯನ್ನು ಮನಗಂಡು, 200 ರಸ್ಟಿರುವ ಎಲ್ಲಾ ಸದಸ್ಸರಿಗೆ ಮತ್ತು ಸಿಬಂಧಿ ವರ್ಗದವರಿಗೆ 15 ರಿಂದ 20 ದಿನಗಳಿಗಾಗುವಷ್ಟು ದಿನ ನಿತ್ಯದ ರೇಶನ್ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು ಮತ್ತು ಕಾರ್ಯದರ್ಶಿಯವರ ನೇತೃತ್ವದಲ್ಲಿ ಹಾಗೂ ಇತರ ಸದಸ್ಯರು ಮತ್ತು ಆಡಳಿತ ಮಂಡಳಿಯ ಪೂರ್ಣ ಸಹಕಾರ ಗಳೊಂದಿಗೆ, ತಮ್ಮ ಸಹಕಾರ ಸಂಘದ ಮುಖ್ಯ ಕಾರ್ಯಾಲಯದಲ್ಲಿ ವಿತರಿಸಲಾಯಿತು. ಅಲ್ಲದೆ, ಬಂದು ಪಡೆಯಲು ಅಸಮರ್ಥರಾದ ಸದಸ್ಸರಿಗೆ ಅವರವರ ಮನೆಗಳಿಗೆ ತಲಪಿಸಲಾಯಿತು.
