ಅಜೆಕಾರು: ಭಾರತ ಲಾಕ್ ಡೌನ್‍ನಿಂದ ಮನೆಯಲ್ಲಿಯೇ ಬರವಣಿಗೆಯೊಂದಿಗೆ ಬಿಡುವನ್ನು ಅರ್ಥಪೂರ್ಣವಾಗಿ ಸಾರ್ಥಕಗೊಳಿಸುತ್ತಿರುವ ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು ಅವರು ಮೊಬೈಲ್‍ನಲ್ಲಿ ತಮ್ಮ ಕಿನ್ಯ ರಾಮಾಯಣವನ್ನು ಉಚಿತವಾಗಿ ಬಿಡುಗಡೆ ಮಾಡುವ ಮೂಲಕ ಶುಕ್ರವಾರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಮಾರ್ಚ್ 23 ರಂದು ತಮ್ಮ ಗದ್ದೆಯ ಹುಲ್ಲನ್ನು ತಂದು ಮುಟ್ಟೆ ಕಟ್ಟಿದ್ದು ಅದರ ಎದುರು ಮುದ್ದು ಮಕ್ಕಳಾದ ಸುನಿಧಿ ಎಸ್ ಅಜೆಕಾರು ಮತ್ತು ಸುನಿಜ ಎಸ್ ಅಜೆಕಾರು ಅವರ ಮೂಲಕ ಈ ಪುಸ್ತಕಗಳನ್ನು ಬಿಡುಗಡೆಗೊಳಿಸಲು ಅನುವು ಮಾಡಿ ಕೊಟ್ಟರು.
ರಜೆಯ ಅವಧಿಯಲ್ಲಿ ತುಳುವಿನ ಈ ರಾಮಾಯಣ ಕೃತಿಯನ್ನು ಆಸಕ್ತರು ಓದಲಿ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದು ಆಸಕ್ತರು ತಮ್ಮ ಹೆಸರು ಮತ್ತು ಊರಿನ ಹೆಸರನ್ನು 9611158493 ಗೆ ವಾಟ್ಸ್ ಆಫ್ ಮಾಡಿ ಮೊಬೈಲ್‍ಗೆ ಉಚಿತವಾಗಿ ಕೃತಿಯನ್ನು ಪಡೆಯ ಬಹುದು. ಈಗಾಗಲೇ ಈ ಕೃತಿಯ 2 ಸಾವಿರ ಪ್ರತಿಗಳನ್ನು ಉಚಿತವಾಗಿ ಪೆನ್ಸಿಲ್ ಬಾಕ್ಸ್ ಚಿತ್ರದ ನಾಯಕಿ ದೀಕ್ಷಾ ಡಿ ರೈ ಅವರ ಬೆನ್ನುಡಿ- ಸಹಕಾರದೊಂದಿಗೆ ವಿತರಿಸಿದ್ದಾರೆ.
ಡಾ.ಸುನೀತಾ ಸುನೀತಾ ಶೆಟ್ಟಿ ಅವರ ಮುನ್ನುಡಿ ಮತ್ತು ಕಲಾವಿದ ವಿ.ಕೆ.ಸುವರ್ಣ ಅವರ ಚೆನ್ನುಡಿ ಇದೆ. ಈ ಹಿಂದೆ ಕಂಬಳ ಬೂಕ್, ಆನಂದದ ಅಧಿಪತಿ ಆನಂದ ಆಳ್ವ, ಅವರ್ ಓನ್ ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಈ ಬೂಕ್‍ಗಳನ್ನು ಪ್ರಕಟಿಸಿದ್ದಾರೆ.
