ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಮೂರು ಮಕ್ಕಳ ತಾಯಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ.ರೋಡ್ ಸಮೀಪದ ಪರ್ಲದಲ್ಲಿ ಶನಿವಾರ ಪೂರ್ವಾಹ್ನ ನಡೆದಿದೆ.
ತುಂಬೆ ನಿವಾಸಿ ಅಬ್ಬಾಸ್ ಅಲಿ ಅವರ ಪತ್ನಿ ರಮೀಝಾ ಬಾನು(29) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ದಂಪತಿಗೆ ಮೂವರು ಮಕ್ಕಳಿದ್ದು, ತುಂಬೆ ನಿವಾಸಿಗಳಾದ ಇವರು ಕೆಲವು ಸಮಯದಿಂದ ಬಿ.ಸಿ.ರೋಡಿನ ಪೆರ್ಲದಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಾಗಿದ್ದಾರೆ.ಆತ್ಮಹತ್ಯೆಗೆ ಸ್ಪಪ್ಟ ಕಾರಣ ತಿಳಿದುಬಂದಿಲ್ಲ.
ಆದರೆ ಲಾಕ್ ಡೌನ್ ಸಮಯದಲ್ಲಿ ಹೊರ ಹೋಗದಂತೆ ಹೇಳಿದರೂ ಆಟೋ ಚಾಲಕನಾಗಿರುವ ಪತಿ ಆಟೋದೊಂದಿಗೆ ಮನೆಯಿಂದ ಹೊರ ಹೋದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಕೇಸ್ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
