ಬಂಟ್ವಾಳ: ಜೀವದ ಹಂಗು ತೊರೆದು ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮನೆ,ಮನೆ ತೆರಳಿ ಜಾಗೃತಿ ಮೂಡಿಸುತ್ತಿರುವ ಬಂಟ್ವಾಳ ತಾಲೂಕಿನ 351 ಆಶಾಕಾರ್ಯಕರ್ತೆಯರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಯಕ್ತಿಕ ನೆಲೆಯಲ್ಲಿ 25 ಕೆಜಿ  ಅಕ್ಕಿ ವಿತರಣೆಗೆ ಶನಿವಾರ ಚಾಲನೆ ನೀಡಲಾಯಿತು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರ ನೇತೃತ್ವದಲ್ಲಿ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೧, ವಾಮದಪದವುನಲ್ಲಿ ೧೧, ಪುಂಜಾಲಕಟ್ಟೆಯಲ್ಲಿ ೨೨, ದೈವಸ್ಥಳ ೧೫, ನಾವೂರ ೬, ಪಂಜಿಕಲ್ಲು ೧೩ ಸೇರಿ ಒಟ್ಟು ೭೮ ಮಂದಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಶಾ ಕಾರ್ಯಕರ್ತೆಯರಿಗೆ ಅಕ್ಕಿಯನ್ನು  ವಿತರಿಸಲಾಯಿತು.IMG-20200404-WA0074

ಕೊರೊನಾ ವೈರಸ್ ನ ಭೀತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ ಜನತೆಗೆ ಯಾವುದೇ ತೊಂದರೆ ಯಾಗದಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಿವಿಧ ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಕಾರ್ಯಗಳನ್ನು  ಮಾಡುತ್ತಿದ್ದಾರೆ.ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೂ ಅಕ್ಕಿ ವಿತರಿಸಲು ಶಾಸಕರು ಮುಂದಾಗಿದ್ದು,ಈ ಬಗ್ಗೆ ಪಟ್ಟಿ ಸಿದ್ದಪಡಿಸಲಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.ಕೊರೊನಾ ಲಾಕ್ ಡೌನ್ ಅದ ಹಿನ್ನೆಲೆಯಲ್ಲಿ ಸಮಸ್ಯೆ ಯಲ್ಲಿರುವ ಪ್ರತಿ ಕುಟುಂಬಗಳಿಗೆ ವೈದ್ಯಕೀಯ ಸಹಿತ ಎಲ್ಲಾ ನೆರವನ್ನು ನೀಡಲು ನಿರಂತರವಾಗಿ  ಪ್ರತಿ ಗ್ರಾಮದಲ್ಲಿ ಶಾಸಕರ ಸೂಚನೆಯಂತೆ ಯುವ ತಂಡಗಳು ಅವಿರತವಾಗಿ ಶ್ರಮಿಸುತ್ತಿದೆ.‌ದಯಾನಂದ ಸಪಲ್ಯ, ಹರೀಶ್ ಆಚಾರ್ಯ, ಪರಮೇಶ್ವರ ಪೂಜಾರಿ, ಸಂತೋಷ್ ಕುಮಾರ್, ಪುರುಷೋತ್ತಮ ಶೆಟ್ಟಿ, ದಿನೇಶ್ ದಂಬೆ,ಸಂತೋಷ್ ಜೈನ್, ಶ್ರೇಯಸ್, ಪ್ರಭಾಕರ ಶೆಟ್ಟಿ, ಪ್ರಣಾಮ್, ಡಾ.ಉಮೇಶ್ ಅಡ್ಯಂತಾಯ, ರಾಮಕೃಷ್ಣ ಮಯ್ಯ, ಚಿದಾನಂದ ರೈ, ಪ್ರಕಾಶ್ ಅಂಚನ್, ಚಿದಾನಂದ ಕುಲಾಲ್, ಕೇಶವ,ಮೋಹನ್ ದಾಸ್, ಕೇಶವ ಲೂಜಂತೋಡಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *