ಬಂಟ್ವಾಳ:  ಬಿ.ಸಿ.ರೋಡ್ ನಲ್ಲಿ ನಗರ ಮತ್ತು ಟ್ರಾಫಿಕ್ ಪೊಲೀಸರು ಬಂದ್ ಅವಧಿಗೆ ಮುನ್ನ,ನಂತರ ದ್ವಿಚಕ್ರ ವಾಹನಗಳನ ಸಹಿತ ಇತರ ಓಡಾಡುವ ವಾಹನಗಳನ್ನೆಲ್ಲ ಬಿಡದೆ ಠಾಣೆಗೆ ತೆಗೆದುಕೊಂಡು ಹೋಗುವ ಮೂಲಕ ಶನಿವಾರ ಬಿಗು ಬಂದೋಬಸ್ತ್ ನಡೆಸಿ, ಕೊರೊನಾ ವಿರುದ್ಧ ಜನರು ಮನೆಯಿಂದ ಹೊರಬಾರದಂತೆ ನೋಡಿಕೊಂಡರು.4bhseize

ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಸಿ.ಡಿ.ನಾಗರಾಜ್, ಎಸ್ .ಐ ಗಳಾದ ಅವಿನಾಶ್, ಪ್ರಸನ್ನ ಹಾಗೂ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆಯನ್ನು  ನಡೆಸಿದ್ದರು. ಎಸ್ಪಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳು ನಿಗದಿತ ಅವಧಿಯಾದ ಬೆಳಗ್ಗೆ 7ರಿಂದ 12ರೊಳಗೆ ಸಂಚರಿಸಲು ಅನುಮತಿ ಇದೆ ಎಂಬ ಮಾಹಿತಿ ಇದ್ದರೂ ಬಿ.ಸಿ.ರೋಡ್,ಬಂಟ್ವಾಳ ಮೊದಲಾದೆಡೆ  ಪೊಲೀಸರು  ದ್ವಿಚಕ್ರ ವಾಹನಕ್ಕೂ ತಡೆಯೊಡ್ಡಿದ್ದಾರೆ.

ಬೆಳಿಗ್ಗೆ 7 ರಿಂದ12 ರವರೆಗೆ ಪಡಿತರ ಖರೀದಿ ಇನ್ನಿತರ ಅಗತ್ಯ ಕೆಲಸಕ್ಕಾಗಿ ಬಂದಿರುವ ಬೈಕ್ ಸವಾರರನ್ನು ಪೋಲಿಸರು ವಶಪಡಿಸಿರುವ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಮಾತ್ರ ಖಾಸಗಿ ವಾಹನಕ್ಕೆ ನಿರ್ಬಂಧ ಹೇರಲಾಗಿದ್ದು,ಇದೇ ಆದೇಶ  ಎಸ್ಪಿಯವರ ವ್ಯಾಪ್ತಿಯಲ್ಲಿ   ಜಾರಿಯಲ್ಲಿದೆಯೇ,ಇಲ್ಲವೇ ಎಂಬ ಬಗ್ಗೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಹಿತಿ ಇಲ್ಲದಿರುವುದು ಈ ಗೊಂದಲಕ್ಕೆ ಕಾರಣವಾಗಿದ್ದು,ಕೆಲವರು ಪೋಲಿಸರ ಜೊತೆ ವಾಗ್ವಾದಕ್ಕು ಮುಂದಾಗಬೇಕಾಯಿತು.ನ್ಯಾಯಬೆಲೆ ಅಂಗಡಿಗಳು ಸಂಜೆಯವರೆಗೂ ತೆರೆದು ಪಡಿಯರ ವಿತರಿಸುತ್ತಿರುವ ಹಿನ್ನಲೆಯಲ್ಲಿ ಅಕ್ಕಿ ಸಹಿತ ಇತರ ಸಾಮಾಗ್ರಿಗಳನ್ನು ಮನೆಗೆ ಒಯ್ಯಲು ಆಟೋ,ದ್ವಿಚಕ್ರ ವಾಹನಕ್ಕೆ ಸಂಚಾರಕ್ಕೆ ಅವಕಾಶವಿಲ್ಲದಿದ್ದರಿಂದ ಪರದಾಡಬೇಕಾಯಿತು.

ತಡವಾಗಿ ತೆರೆದ ಅಂಗಡಿ :

ಬಿ. ಸಿ.ರೋಡಿನ ಹೃದಯಭಾಗದಲ್ಲಿರುವ ರೇಷನ್ ಅಂಗಡಿಯೊಂದು ಸುಮಾರು 1 ಗಂಟೆಯಷ್ಟು ತಡವಾಗಿ ತೆರೆದ ಕಾರಣ ಅಲ್ಲಿಗೆ ಟೋಕನ್ ಪಡೆದು ಆಗಮಿಸಿದ ಗ್ರಾಹಕರು ಅನಿವಾರ್ಯವಾಗಿ ಬಿಸಿಲಿಗೆ ನಿಲ್ಲಬೇಕಾದ ಪ್ರಸಂಗ ಶನಿವಾರ ನಡೆಯಿತು.

ರೇಷನ್ ವಿತರಣೆಗೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ಸಮಯ ನಿಗದಿಯಾಗಿದ್ದು, ಅದರಂತೆ ಟೋಕನ್ ಪಡೆದ ಗ್ರಾಹಕರು ಆಗಮಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದರು. ಆದರೆ ಸುಮಾರು 7.45 ಆದರೂ ಅಂಗಡಿ ಬಾಗಿಲು ತೆರೆಯದ ಕಾರಣ ಬಳಿಕ ಬಂಟ್ವಾಳ ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಲಾಯಿತು. ಬಳಿಕ ಅಧಿಕಾರಿಗಳ ಭೇಟಿ ನಂತರ ಅಂಗಡಿ ಬಾಗಿಲು ತೆರೆದು ರೇಷನ್ ವಿತರಿಸಲಾಯಿತು. 

By suddi9

Leave a Reply

Your email address will not be published. Required fields are marked *