ಗುರುಪುರ : ಗುರುಪುರ ಪೇಟೆಯಲ್ಲಿರುವ ಪಡಿತರ ಚೀಟಿ ಸೊತ್ತು ಪೂರೈಕೆ ಅಂಗಡಿಯಲ್ಲಿ ಚೀಟಿದಾರರು ಸಾಮಾಜಿಕ ಅಂತರವಿಟ್ಟುಕೊಂಡು ಪಡಿತರ ಸೊತ್ತು ಸ್ವೀಕರಿಸಿದರು.
ಅಂಗಡಿಯ ಎದುರು ಅಂತರ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ಉದ್ದಕ್ಕೆ ಸುಣ್ಣ ಬಳಿದು ವ್ಯವಸ್ಥೆಗೊಳಿಸಲಾದ ವೃತ್ತಗಳಲ್ಲಿ ಬೆಳ್ಳಂಬೆಳಗ್ಗೆಯೇ ಗ್ರಾಹಕರು ತಮ್ಮ ಚೀಲಗಳನ್ನಿಟ್ಟು ಸರದಿಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು.
ಅಚ್ಚರಿಯೆಂದರೆ, ಸರ್ಕಾರದ ಆದೇಶದಂತೆ ಇಲ್ಲಿನ ಅಂಗಡಿಗೆ ಪಡಿತರದಾರರಿಗೆ ಪೂರೈಸಲು ಎರಡು ತಿಂಗಳ ಅಕ್ಕಿ ಬಂದಿದ್ದರೆ ಗೋಧಿ, ತೊಗರಿಬೇಳೆ ಬಂದಿಲ್ಲ.
