`ದೀಪಾವಳಿ’ ಎನ್ನುವ ಶಬ್ದವು ದೀಪ+ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪ ಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನ ತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕ ಚತುರ್ದಶಿ) ಅಮಾವಾಸ್ಯೆ (ಲಕ್ಷ್ಮೀಪೂಜೆ) ಮತ್ತು ಕಾತರ್ಿಕ ಶುಕ್ಲ ಪಾಡ್ಯ (ಬಲಿಪಾಡ್ಯ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಗಣನೆಗೆ ತೆಗೆದುಕೊಳ್ಳದೆ ದೀಪಾವಳಿಯು ಮೂರು ದಿನಗಳದ್ದಾಗಿದೆ ಎಂದು ನಂಬುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆ ಈ ದಿನಗಳು ದೀಪಾವಳಿಗೆ ಹೊಂದಿಕೊಂಡೇ ಬರುವುದರಿಂದ ಇವುಗಳನ್ನು ದೀಪಾವಳಿ ಯಲ್ಲಿಯೇ ಸಮಾವೇಶಗೊಳಿಸಲಾಗುತ್ತದೆ. ಆದರೆ ಈ ಹಬ್ಬಗಳು ಬೇರೆ ಬೇರೆಯೇ ಆಗಿವೆ.

ಅ.ಯಮದೀಪದಾನ
ಪ್ರಾಣಹರಣ ಮಾಡುವ ಅಧಿಕಾರವು ಯಮರಾಜನದ್ದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಸಾಧ್ಯವಿಲ್ಲ. ಆದರೆ ಅಕಾಲ ಮೃತ್ಯು ಬರಬಾರದೆಂದು ಯಮಧರ್ಮ ರಾಯನ ಪ್ರೀತ್ಯರ್ಥವಾಗಿ ಧನತ್ರಯೋದಶಿ ಯಂದು ಹಿಟ್ಟಿನ ಕಣಕದಿಂದ ಹದಿಮೂರು ಎಣ್ಣೆಯ ದೀಪಗಳನ್ನು ತಯಾರಿಸಿ ಸಾಯಂಕಾಲದ ಸಮಯದಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿ ಇಡ ಬೇಕು. ಸಾಮಾನ್ಯವಾಗಿ ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಮುಂದಿನ ಮಂತ್ರ ದಿಂದ ಪ್ರಾರ್ಥನೆ ಮಾಡಬೇಕು.
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಸಹ|
ತ್ರಯೋದ ಶ್ಯಾಂದೀಪದಾನಾತ್ ಸೂರ್ಯಜಃ ಪ್ರೀಯ ತಾಂಮಮ||
ಅರ್ಥ: ಈ ಹದಿಮೂರು ದೀಪ ಗಳನ್ನು ನಾನು ಸೂರ್ಯಪುತ್ರನಿಗೆ ಅಪರ್ಿಸು ತ್ತೇನೆ. ಆತನು ನನ್ನನ್ನು ಮೃತ್ಯು ಪಾಶದಿಂದ ಬಿಡಿಸಲಿ ಮತ್ತು ನನ್ನ ಕಲ್ಯಾಣ ಮಾಡಲಿ.
ಆ.ಆಶ್ವಯುಜ ಕೃಷ್ಣ ಚತುರ್ದಶಿ
ಆ1.ನರಕ ಚತುರ್ದಶಿ: ಶ್ರೀಕೃಷ್ಣನು ಈ ದಿನದಂದು ನರಕಾಸುರನನ್ನು ವಧಿಸಿ ದನು. ಇದರ ಸ್ಮರಣೆ ಮಾಡಿ ಶ್ರೀಕೃಷ್ಣನಲ್ಲಿ `ನನ್ನಲ್ಲಿರುವ ನರಕರೂಪಿ ಪಾಪವಾಸನೆ ಯನ್ನು ಮತ್ತು ಅಹಂನ್ನು ನಾಶ ಮಾಡಿ ಈಶ್ವರಪ್ರಾಪ್ತಿಯ ಮಾರ್ಗವನ್ನು ಸುಲಭ ಗೊಳಿಸು’ ಎಂದು ಪ್ರಾಥರ್ಿಸಬೇಕು.
ಆ2.ಯಮತರ್ಪಣ: ಅಪಮೃತ್ಯು ನಿವಾರಣೆಗಾಗಿ ಅಭ್ಯಂಗಸ್ನಾನದ ನಂತರ ಯಮತರ್ಪಣ ನೀಡಬೇಕೆಂದು ಹೇಳ ಲಾಗಿದೆ. ಇದರ ವಿಧಿಯು ಪಂಚಾಂಗದಲ್ಲಿ ರುತ್ತದೆ. ಅದನ್ನು ನೋಡಿ ಅದರಂತೆ ವಿಧಿ ಯನ್ನು ಆಚರಿಸಬೇಕು. ಅನಂತರ ತಾಯಿಯು ಮಕ್ಕಳಿಗೆ ಆರತಿ ಎತ್ತುತ್ತಾಳೆ.
ಇ.ಆಶ್ವಯುಜ ಅಮಾವಾಸ್ಯೆ
ಇ1.`ಲಕ್ಷ್ಮೀಪೂಜೆ’ : `ಪ್ರಾತಃಕಾಲದಲ್ಲಿ ಮಂಗಳಸ್ನಾನ ಮಾಡಿ ದೇವರಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷ ಕಾಲದಲ್ಲಿ ಬಳ್ಳಿಎಲೆಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ವಿಷ್ಣು ಮತ್ತು ಕುಬೇರ ಮುಂತಾದವರ ಪೂಜೆಯೇ ಈ ದಿನದ ವಿಶೇಷವಾಗಿದೆ. ಈದಿನವೇ ವಿಷ್ಣುವು ಲಕ್ಷ್ಮೀ ಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವತರ್ಿಯ ಸೆರೆಮನೆಯಿಂದ ಮುಕ್ತ ಗೊಳಿಸಿದನು ನಂತರ ಎಲ್ಲ ದೇವತೆಗಳು ಹೋಗಿ ಕ್ಷೀರಸಾಗರದಲ್ಲಿ ಶಯನ ಮಾಡಿದರು ಎನ್ನುವ ಕಥೆ ಇದೆ. ಅವರ ಪ್ರೀತ್ಯರ್ಥವಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಎಲ್ಲ ಸುಖೋಪಭೋಗಗಳ ಉತ್ತಮ ವ್ಯವಸ್ಥೆ ಮಾಡಿ ಎಲ್ಲೆಡೆಯೂ ದೀಪಗಳನ್ನು ಹಚ್ಚಬೇಕೆಂದು ಹೇಳಲಾಗಿದೆ.
ಇ2.ಅಲಕ್ಷ್ಮೀ ನಿಮರ್ೂಲನೆ:
ಈ ದಿನದಂದು ಹೊಸ ಕಸಬರಿಕೆಯನ್ನು ಖರೀದಿ ಸುತ್ತಾರೆ. ಅದಕ್ಕೆ ಲಕ್ಷ್ಮೀ ಎನ್ನುತ್ತಾರೆ. ಆ ಪೊರಕೆಯಿಂದ ನಡು ರಾತ್ರಿ ಕಸ ಗುಡಿಸಿ ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು ಎಂದು ಹೇಳಲಾಗಿದೆ. ಇದಕ್ಕೆ ಅಲಕ್ಷ್ಮೀ (ಕಸ-ದಾರಿದ್ರ್ಯ) ನಿಮರ್ೂಲನೆ ಎನ್ನುತ್ತಾರೆ. ಸಾಮಾನ್ಯವಾಗಿ ಯಾವಾಗಲೂ ರಾತ್ರಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಈ ರಾತ್ರಿ ಮಾತ್ರ ಗುಡಿಸ ಬೇಕು. ಹಾಗೆ ಕಸ ಗುಡಿಸುವಾಗ ಮೊರ ಮತ್ತು ತಮ್ಮಟೆಗಳನ್ನು (ಚರ್ಮದ ವಾದ್ಯ ಗಳನ್ನು) ಬಾರಿಸಿ ಅಲಕ್ಷ್ಮೀಯನ್ನು ಓಡಿಸುತ್ತಾರೆ.
ಲಕ್ಷ್ಮೀದೇವಿಯು ತನ್ನ ವಾಸಕ್ಕೆ ಆರಿಸುವ ಸ್ಥಳ : ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷ್ಮೀಯು ಎಲ್ಲೆಡೆ ಸಂಚರಿಸಿ ತನ್ನ ನಿವಾಸ ಕ್ಕಾಗಿ ಯೋಗ್ಯಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. `ಸ್ವಚ್ಛತೆ, ಶೋಭೆ ಮತ್ತು ರಸಿಕತೆ ಕಾಣುವಲ್ಲಿ ಅವಳು ಆಕಷರ್ಿತಳಾಗುತ್ತಾಳೆ. ಅಲ್ಲದೆ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮ ವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ/ಪತಿವ್ರತಾ ಸ್ತ್ರೀಯರು ವಾಸಿಸುವ ಮನೆಯಲ್ಲಿ ರಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’
ದೇವಿಗೆ ಅಪರ್ಿಸುವ ನೈವೇದ್ಯ : ನೈವೇದ್ಯದಲ್ಲಿ ಲವಂಗ, ಏಲಕ್ಕಿ, ಹಾಲು ಮತ್ತು ಸಕ್ಕರೆ ಈ ಪದಾರ್ಥಗಳು ಇರಬೇಕು. ಈ ಪದಾರ್ಥಗಳಿಗೆ `ತ್ರಿಗುಣಾ ವತಾರ’ ಎನ್ನುತ್ತಾರೆ. ಈ ಪದಾರ್ಥಗಳು ಜೀವದಲ್ಲಿನ ತ್ರಿಗುಣಗಳ ಪ್ರಮಾಣವನ್ನು ಹೆಚ್ಚು-ಕಡಿಮೆ ಮಾಡುವ ಕಾರ್ಯವನ್ನು ಮಾಡುತ್ತವೆ.
ಈ.ಕಾತರ್ಿಕ ಶುಕ್ಲ ಪಾಡ್ಯ
ಈ1.ಬಲಿಪಾಡ್ಯ: ಇದು ಮೂರೂವರೆ ಮುಹೂರ್ತಗಳಲ್ಲಿ ಅರ್ಧ ಮುಹೂರ್ತವಾಗಿದೆ. ಬಲಿರಾಜನ ಅಧಿಪತ್ಯ ದಲ್ಲಿರುವ ಕೆಟ್ಟಶಕ್ತಿಗಳಿಂದ ತೊಂದರೆಯಾಗ ಬಾರದೆಂದು ಈ ದಿನ ಬಲಿರಾಜನ ಪ್ರತಿಮೆಗೆ ಪೂಜೆ ಮಾಡುತ್ತಾರೆ. ಬಲಿಪಾಡ್ಯ ದಂದು ನೆಲದ ಮೇಲೆ ಪಂಚರಂಗೀ (5ಬಣ್ಣಗಳ) ರಂಗೋಲಿಯಲ್ಲಿ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವುಗಳ ಪೂಜೆ ಮಾಡಿ ಮದ್ಯ ಮಾಂಸಗಳ ನೈವೇದ್ಯವನ್ನು ತೋರಿಸು ತ್ತಾರೆ. ಅನಂತರ ಬಲಿಯ ಪ್ರೀತ್ಯರ್ಥ ದೀಪ ಮತ್ತು ವಸ್ತ್ರದಾನ ಮಾಡುತ್ತಾರೆ. ಈ ದಿನ ಪ್ರಾತಃಕಾಲದಲ್ಲಿ ಅಭ್ಯಂಗಸ್ನಾನವಾದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿ ಬೆಳಗು ತ್ತಾರೆ. ಮಧ್ಯಾಹ್ನ ಪಕ್ವಾನ್ನ ಭೋಜನ ಮಾಡುತ್ತಾರೆ. ದೀಪಾವಳಿಯಲ್ಲಿ `ಬಲಿ ಪಾಡ್ಯ’ದ ದಿನವನ್ನೇ ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಜನರು ಹೊಸ ಬಟ್ಟೆಬರೆಗಳನ್ನು ಧರಿಸಿಇಡೀ ದಿನ ವನ್ನು ಆನಂದದಿಂದ ಕಳೆಯುತ್ತಾರೆ. ಈ ದಿನವೇ ಗೋವರ್ಧನ ಪೂಜೆಯನ್ನು ಮಾಡುವ ಪದ್ಧತಿ ಇದೆ. ಇದಕ್ಕಾಗಿ ಸೆಗಣಿಯ ರಾಶಿಯನ್ನು ಮಾಡಿ ಅದಕ್ಕೆ ಗರಿಕೆ ಮತ್ತು ಹೂಗಳನ್ನು ಚುಚ್ಚುತ್ತಾರೆ. ಕೃಷ್ಣ, ಗೋಪಾಲ, ಇಂದ್ರ, ಹಸು ಮತ್ತು ಕರುಗಳ ಆಕೃತಿಗಳನ್ನು ಜೊತೆಗೆ ಇಟ್ಟು ಅವುಗಳಿಗೂ ಪೂಜೆ ಮಾಡಿ ಮೆರವಣಿಗೆ ಮಾಡುತ್ತಾರೆ.
ಈ.ಉತ್ಸವದ ಸ್ವರೂಪ
ಈ1.ದೀಪಗಳ ಸಾಲು: ದೀಪಾವಳಿ ಯಂದು ಸಾಯಂಕಾಲ ಮನೆಯ ಒಳಗೆ ಮತ್ತು ಹೊರಗೆ ದೀಪಗಳನ್ನು ಸಾಲಾಗಿ ಹಚ್ಚಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ದೀಪ ಹಚ್ಚುವುದರಿಂದ ಮನೆಗೆ ಅಪ್ರತಿಮವಾದ ಶೋಭೆಯುಂಟಾಗಿ ಉತ್ಸಾಹ ಮತ್ತು ಆನಂದವಾಗುತ್ತದೆ. ವಿದ್ಯುತ್ದೀಪಗಳ ಮಾಲೆ ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿ ಇರುತ್ತದೆ.
ಈ2.ಆಕಾಶದೀಪ: ಇದು ದೀಪಾಲಂಕಾರದ ಒಂದು ಭಾಗವಾಗಿದೆ. ಆಶ್ವಯುಜ ಶುಕ್ಲ ಏಕಾದಶಿಯಿಂದ ಕಾತರ್ಿಕ ಶುಕ್ಲ ಏಕಾದಶಿಯ ವರೆಗೆ ಮನೆಯ ಹೊರಗೆ ಒಂದು ಎತ್ತರವಾದ ಕಂಬವನ್ನು ನಿಲ್ಲಿಸಿ ಅದರ ಮೇಲೆ ಹಗ್ಗದ ಸಹಾಯದಿಂದ ತೂಗು ಹಾಕುವ ದೀಪವನ್ನು ಆಕಾಶದೀಪ ಎನ್ನುತ್ತಾರೆ. ಅದನ್ನು ತೂಗು ಹಾಕುವ ವಿಧಿಯು ಮುಂದಿನಂತಿದೆ.
ಮನೆಯ ಹತ್ತಿರದಲ್ಲಿಯೇ ಸ್ವಲ್ಪ ಜಾಗವನ್ನು ಗೋಮಯದಿಂದ ಸಾರಿಸಬೇಕು. ಅದರ ಮೇಲೆ ಚಂದನಯುಕ್ತ ಜಲವನ್ನು ಸಿಂಪಡಿಸಿ ಅಷ್ಟದಳ ಕಮಲವನ್ನು ಬಿಡಿಸ ಬೇಕು. ಮಧ್ಯ ಭಾಗದಲ್ಲಿ 20ಅಡಿ, 9ಅಡಿ ಅಥವಾ 5ಅಡಿ ಉದ್ದದ ಕಂಬ ವನ್ನು ನೆಡಬೇಕು. ಅದನ್ನು ವಸ್ತ್ರ, ಪತಾಕೆ, ಅಷ್ಟ ಘಂಟೆ, ಕಲಶ ಮುಂತಾದವುಗಳಿಂದ ಅಲಂಕರಿಸಿ ಅದರ ಮೇಲೆ ಅಷ್ಟದಳಾಕೃತಿ ದೀಪವನ್ನು (ಆಕಾಶದೀಪ) ಮಾಡಿ ಹಾಕಬೇಕು. ಅದರಲ್ಲಿ ದೊಡ್ಡ ದೀಪವನ್ನು ಇಡಬೇಕು. ಅದರ ಸುತ್ತಲೂ ಕಮಲದ ಪ್ರತ್ಯೇಕ ದಳಗಳಲ್ಲಿ ಒಂದರಂತೆ ಎಂಟು ದೀಪಗಳನ್ನು ಧರ್ಮ, ಹರ, ಭೂತ, ದಾಮೋದರ, ಧರ್ಮರಾಜ, ಪ್ರಜಾಪತಿ, ಪಿತೃಗಳು ಮತ್ತು ಪ್ರೇತಗಳು ಇವರನ್ನು ಉದ್ದೇಶಿಸಿ ಇಡಬೇಕು. ದೀಪಗಳಲ್ಲಿ ಎಳ್ಳೆಣ್ಣೆ ಯನ್ನು ಹಾಕಬೇಕು. ಅನಂತರ ದೀಪಕ್ಕೆ ಪಂಚೋಪಚಾರ ಪೂಜೆ ಮಾಡಿ ಅದನ್ನು ಮುಂದಿನ ಮಂತ್ರೋಚ್ಚಾರ ಸಹಿತವಾಗಿ ಮೇಲಕ್ಕೆ ಏರಿಸಬೇಕು.
ದಾಮೋದರಾಯ ನಭಸಿ ತುಲಾಯಾಂ ಲೋಲಯಾ ಸಹ|
ಪ್ರದೀಪಂ ತೇ ಪ್ರಯಚ್ಛಾಮಿ ನಮೋ ನಂತಾಯ ವೇಧಸೇ||
ಅರ್ಥ: ಶ್ರೇಷ್ಠ ಪರಮೇಶ್ವರನಾದ ದಾಮೋದರನಿಗೆ ಈ ಜ್ಯೋತಿಸಹಿತ ದೀಪವನ್ನು ಅಪರ್ಿಸುತ್ತೇನೆ. ಅವನು ನನ್ನ ಕಲ್ಯಾಣವನ್ನು ಮಾಡಲಿ. ಲಕ್ಷ್ಮೀಪ್ರಾಪ್ತಿಯು ಇದರ ಫಲವಾಗಿದೆ.’
ಈ.ಅಭ್ಯಂಗಸ್ನಾನ: ನರಕ ಚತುರ್ದಶಿಯಿಂದ ಬಲಿಪಾಡ್ಯದ ವರೆಗೆ ದೀಪಾವಳಿಯ ಮೂರು ದಿನಗಳಲ್ಲಿ ಪ್ರತೀ ದಿನ ಅಭ್ಯಂಗಸ್ನಾನ ಮಾಡಲು ಹೇಳಲಾಗಿದೆ.
(ಆಧಾರ: ಸನಾತನ ಸಂಸ್ಥೆಯ ಗ್ರಂಥ ಹಬ್ಬ, ಧಾಮರ್ಿಕ ಉತ್ಸವ ಮತ್ತು ವ್ರತಗಳು.)
ಸಂಪರ್ಕ : 7204082649
