ಸುದ್ದಿ9 ಪೊಳಲಿ ದಶರಾ ಹಬ್ಬವನ್ನು ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ನವರಾತ್ರಿಯ ಮೊದಲನೇ ದಿನದಿಂದ 9ನೇ ದಿನದವರೇಗೆ 3ವರ್ಷಕಿಂತ ಐದು ವರ್ಷದ ಒಳಗಿನ ಮಕ್ಕಳನ್ನು ನವದುರ್ಗೆಯವರಂತೆ ಅಲಂಕರಿಸಿ ಕೂಮಾರಿ ಪೂಜೆ ನೆರವೇರಿಸಲಾಯಿತು.
ನವದುರ್ಗೆಯರ ಪೂಜೆ ನೆರವೇರಿಸಿದ ಸ್ವಾಮಿ.
ಸುಮಾರು 3ರಿಂದ 5ವರ್ಷದ ಒಳಗಿನ ಒಬ್ಬೊಬ್ಬರ ಮನೆಯ ಒಬ್ಬಳು ಕುಮಾರಿಯವರನ್ನು ದೇವಿಯಂತೆ ಅಲಂಕರಿಸಿದ ಕುಮಾರಿಗೆ ಸ್ವಾಮಿಜಿಯವರು ಕುಮಾರಿಗೆ ಪೂಜೆ ಮಾಡಿ ಕಾಲಿಗೆ ಬಿದ್ದು ನಮಸ್ಕರಿಸಿ ಕುಮಾರಿಯವರಲ್ಲಿ ದೇವಿಯನ್ನು ಕಾಣುತ್ತಾರೆ ಈಗೆ 9ನೇದಿನದವರೆಗೆ 9ಕುಮಾರಿಯವರಿಗೆ ಪೂಜೆ ನೆರವೇರಿಸಿ ಕಡೆ ದಿನದಲ್ಲಿ 9 ಕುಮಾರಿಯವರನ್ನು ಅಲಂಕರಿಸಿ ಪೂಜೆ ಮಾಡುತ್ತಾರೆ ನಂತರ ಅವರಿಂದ ಆಶೀರ್ವಾದ ಪಡೆದು ಅವರಿಗೆ ಫಲಪುಷ್ಪ ನೀಡಿ ಸತ್ಕರಿಸುತ್ತಾರೆ.

6-1

6-2

6-3

6-4

6-5

6-6

6-7

6-8

4p

1p

2-p

3p
ದುಷ್ಟ ಮಹಿಷಾಸುರನು ತನ್ನ ಮಾಯೆಯಿಂದ ಬೇರೆ ಬೇರೆ ಅವಾತಾರಗಳನ್ನು ಧರಿಸಿ ಶ್ರೀ ದೇವಿಯೊಂದಿಗೆ ಯುದ್ದ ಮಾಡಿದಾಗ ಆದಿಶಕ್ತಿಯು ಶ್ಯೆಲ ಪುತ್ರಿ ,ಬ್ರಹ್ಮಚಾರಿಣಿ ,ಚಂದ್ರಘಂಟಾ, ಕೂಷ್ಮಾಂಡ ಸ್ಕಂದಮಾತಾ,ಮಹಾಗೌರಿ,ಕಾತ್ಯಾಯಿನಿ, ಕಾಲರಾತ್ರಿ, ಸಿದ್ದಿಧಾತ್ರಿ ಎಂಬ ಒಂಬತ್ತು ರೂಪಗಳನ್ನು ಧರಿಸಿ ನವರಾತ್ರಿ ಗಳಲ್ಲಿ ಯುದ್ದ ಮಾಡುತ್ತಾಳೆ ಇದೇ ವಿಜಯದಶಮಿ.
ಸ್ಮಶಾನಕಾಳಿ:ಕಾಳೀಯ ರೂಪ ಧರಿಸಿದ ಸ್ವಾಮೀಜಿ:
ಆದಿಶಕ್ತಿಯು ಪ್ರಪಂಚವನ್ನೆ ಸುಟ್ಟು ಬಿಡುತ್ತೇನೆ ಎನ್ನುವ ಕೋಪದಿಂದ  ಸ್ಮಶಾನ ಕಾಳಿ ರೂಪವನ್ನು ಧರಿಸಿದಾಗ ಶಿವನು ಬಾಲಶೀಶುವಿನ ರೂಪ ಥಾಳಿ ಕಾಳಿಯ ಪಾದ ಕಮಲಗಳ ಅಡಿಯಲ್ಲಿ ಬೀಳುತ್ತಾನೆ ಶಿವನನ್ನು ಮೆಟ್ಟಿ ನಿಂತ ಮೇಲೆ  ಸ್ಮಶಾನ  ಕಾಳಿಯು ಕೋಪಶಮನಗೊಂಡು ಶಾಂತರೂಪ ತಾಳುತ್ತಾಳೆ.
ಕಾಳಿ ರೂಪ ತಾಳಿ ಪೂಜೆ ಮಾಡಿದ ಸ್ವಾಮೀಜಿ.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ತಮ್ಮ  ಆಶ್ರಮದಲ್ಲಿ ರಾಮಕೃಷ್ಣ ಪರಮಹಂಸರಿಗೆ ಕಾಳಿ ರೂಪದಲ್ಲಿಯೇ ಪೂಜೆ ಮಾಡಿ ಪುಳಕಿತಗೊಂಡರು.
ಬಾಲಕಶ್ರಮದ ಮಕ್ಕಳು ನವದುರ್ಗೆಯವರ ವೇಷ ಧರಿಸಿ ಸ್ವಾಮಿಗೆ ಸಾಥ್ ನೀಡಿದರು. ಕಾಳಿರೂಪಧರಿಸಿದ ಸ್ವಾಮಿಯನ್ನು ಕಂಡು ಸೇರಿದ ಜನರು ಸಾಕ್ಷಾತ್ ದೇವಿಯನ್ನೆ ಕಂಡ ಹಾಗೆ ಎಲ್ಲರು ಕಾಳೀದೇವಿಯ ಪಾದಗಳಿಗೆರಗಿ ನಮಸ್ಕರಿಸಿದರು. ಕಾಳೀ ರೂಪದಲ್ಲಿ ಸ್ವಾಮಿಯನ್ನು ಕಂಡು ಎಲ್ಲರು ಪುಳಕಿತಗೊಂಡರು. ಕಾಲಿ ರೂಪಧರಿಸಿದ ಸ್ವಾಮಿ ವಿವೇಕಚೈತನ್ಯಾನಂದ ಅವರು ನವದುರ್ಗೆಯವರೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ ದೇವಿ ಸನ್ನಿಧಿಯಲ್ಲಿ ಪ್ರಾರ್ಥಿಸಿ ದೇವಿಗೆ ಜೈಕಾರ ಹಾಕಿ ಪ್ರಸಾದ ಸ್ವೀಕರಿಸಿದರು. ತುಮಕೂರು ನಿಖೇತ್ ರಾಜ್ ಅವರು ಆಶ್ರಮದಲ್ಲಿ ಪಾಲ್ಗೊಂಡು ಕಾಳೀಮಾಯೆಕೀ ಜೈ ಎಂದು ಜೈಕಾರ ಹಾಕಿದಾಗ .ನೆರೆದಿದ್ದ ಜನರು ಸೇರಿ ಜೈಕಾರ ಹಾಕಿದರು

By Suddi9

Leave a Reply

Your email address will not be published. Required fields are marked *