ಕೈಕಂಬ:ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ತಾರೆಮಾರ್ ಎಂಬಲ್ಲಿಂದ ಬೆಜ್ಜೆ ವರೆಗಿನ ರಸ್ತೆಗೆ ಅಂದಾಜು 5ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣದ ಕಾಮಗಾರಿಗೆ ಶಾಸಕ ಡಾ|ಭರತ್ ಶೆಟ್ಟಿ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. 
ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಕಾರ್ಯನಿರ್ವಾಹಕ ಅಧಿಕಾರಿ ಸದಾನಂದ, ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಪಿಡಿಒ ಶ್ರೀಮತಿ ರಾಜೀವಿ, ಕಾರ್ಯದರ್ಶಿ ಶ್ರೀಮತಿ ವಸಂತಿ, ಪಂಚಾಯತ್ ರಾಜ್ ಇಲಾಖೆಯ ಇಂಜಿನೀಯರ್ ಗಳಾದ ರೋಹಿದಾಸ್, ವಿಶ್ವನಾಥ್, ಮಂಗಳೂರು ಪಾಲಿಕೆ ಸದಸ್ಯ ಕಿರಣ್ ಕುಮಾರ್, ಪಂಚಾಯತ್ ಸದಸ್ಯರುಗಳಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ ಗುಂಡ್ಯ, ಶ್ರೀಮತಿ ಪುಷ್ಪಾ ನಾಯ್ಕ್, ಶ್ರೀಮತಿ ವಸಂತಿ, ಜಗದೀಶ್ ದುರ್ಗಾಕೊಡಿ, ತಾರಾನಾಥ ಕುಲಾಲ್, ಶ್ರೀಮತಿ ಮಮತಾ, ಮ್ಯಾಕ್ಷಿo ಜೆರಾಲ್ಡ್ ಪಿಂಟೋ, ಶ್ರೀಮತಿ ಸರಸ್ವತಿ, ಗುತ್ತಿಗೆದಾರ ರಂಜನ್ ಅರಳ, ಮತ್ತು ಸ್ಥಳೀಯ ಮುಖಂಡರುಗಳು, ಬಿಜೆಪಿ ನಾಯಕರು, ಗ್ರಾಮಸ್ಥರು ಹಾಜರಿದ್ದರು.
