ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಹಾಗೂ ಅಡ್ಡೂರು ಗ್ರಾಮದಲ್ಲಿ ನಡೆಯಲಿರುವ ಒಟ್ಟು 1.65 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ(ಮಾ. 15) ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.gur-mar-15-Dr. bharath shetty(vanabhojana)

30 ಲಕ್ಷ ರೂ ಅನುದಾನದಲ್ಲಿ ನಡೆಯಲಿರುವ ಗುರುಪುರ ಜಂಕ್ಷನ್‍ನಿಂದ ಶ್ರೀ ಕ್ಷೇತ್ರ ಜಂಗಮ ಮಠದವರೆಗಿನ ಚಾಮಾಣಿ ರಸ್ತೆ ಡಾಮರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದ ಶಾಸಕ ಡಾ. ಭರತ್ ಶೆಟ್ಟಿ, ಬಳಿಕ ತೋಕಾಲ-ಮಲ್ಲಿಗೆ ರಸ್ತೆ(9 ಲ. ರೂ), ವನಭೋಜನ ಒಳರಸ್ತೆ(15 ಲ. ರೂ), ಗುರುಪುರ ಪ್ರಾಥಮಿಕ ಶಾಲೆಯ ಹಿಂಬದಿ ರಸ್ತೆ(14 ಲ. ರೂ), ಹೈಸ್ಕೂಲ್ ಬಳಿ ಒಳರಸ್ತೆ(4 ಲ. ರೂ), ಮಠದಬೈಲು ಸೈಟ್(6 ಲ. ರೂ) ಹಾಗೂ ಅಡ್ಡೂರಿನಲ್ಲಿ ಎರಡು ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದರು.gur-mar-15-Dr. bharath shetty(gurpur junction)-1

ಈ ಸಂದರ್ಭದಲ್ಲಿ ಗುರುಪುರ ಬಿಜೆಪಿ ವಲಯಾಧ್ಯಕ್ಷ ರಾಜೇಶ್ ಸುವರ್ಣ, ಗ್ರಾಪಂ ಸದಸ್ಯರಾದ ಸೇಸಮ್ಮ, ಶೋಭಾ, ಸಾದಿಕ್, ಬಿಜೆಪಿ ಸ್ಥಳೀಯ ಮುಖಂಡರಾದ ಶ್ರೀಕರ ವಿ. ಶೆಟ್ಟಿ, ಸೋಮಯ್ಯ, ಹರೀಶ್ ಬಳ್ಳಿ, ಶಾಂತಿ, ಸತೀಶ್ ಕಾವ, ರಾಜೇಶ್ ಶೆಟ್ಟಿ, ಕಾರ್ಪೊರೇಟರ್ ಲೋಹಿತ್ ಅಮೀನ್, ಜಿ. ಲಕ್ಷ್ಮಣ್ ಶೆಟ್ಟಿಗಾರ, ಶಿವಪ್ರಸಾದ್ ಭಟ್, ಕೆ. ನರಸಿಂಹ ಪೂಜಾರಿ, ವಿನಯ್ ಗುರುಪುರ, ಹೇಮಚಂದ್ರ ಪೂಜಾರಿ, ರಾಮಚಂದ್ರ, ಹರೀಂದ್ರ, ನಳಿನಾಕ್ಷಿ ಶೆಟ್ಟಿ, ವಸಂತ ಪೂಜಾರಿ, ತನಿಯಪ್ಪ ಪೂಜಾರಿ, ಜಿ. ಕೆ. ಸಂದೇಶ್ ಕೊಳದಬದಿ, ಮನೋಜ್, ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ಕೂಸಪ್ಪ ಮಾಸ್ತರ್, ವಿಜಯ್ ಅಲೈಗುಡ್ಡೆ ಮತ್ತಿತರರು ಇದ್ದರು. ವಕೀಲ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.gur-mar-15-Dr. bharath shetty(near highschool)-1

gur-mar-15-Dr. bharath shetty(gurpur junction)-2

By Suddi9

Leave a Reply

Your email address will not be published. Required fields are marked *