ಕೈಕಂಬ: ಶ್ರೀ ಕ್ಷೇತ್ರ ಪೊಳಲಿಯಲ್ಲಿ  ನಡೆಯುವ ಒಂದು ತಿಂಗಳ ಸುಧೀರ್ಘ ಜಾತ್ರಾಮಹೋತ್ಸವಕ್ಕೆ ಭಕ್ತಾದಿಗಳು ಭೇಟಿ ನೀಡಲಿರುವುದರಿಂದ ಇತ್ತೀಚೆಗೆ ದಿನಗಳಲ್ಲಿ ಜಗತ್ತನ್ನೇ ಕಾಡುತ್ತಿರುವ ಕೊರೋನಾ ವೈರಸ್ ತಡೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಸಭೆ ನಡೆಯಿತು .

15vp korona sabeಕ್ಷೇತ್ರದಲ್ಲಿ ಆದಷ್ಟು ಶುಚಿತ್ವ ಕಾಪಾಡುವಂತೆ ಶಾಸಕರು ದೇಗುಲದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.ತಾಲೂಕು ವೈಧ್ಯಾಧಿಕಾರಿ ಡಾ.ದೀಪಾ ಪ್ರಭು ಕೊರೋನಾ ಮುನ್ನೆಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು.ಈ ಸಂದರ್ಭದಲ್ಲಿ ಪೊಳಲಿ ಆಡಳಿತ ಮೊಕ್ತೇಸರರಾದ ,ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಚೇರಾ ಸೂರ್ಯನಾರಾಯಣ ರಾವ್, ಪ್ರಧಾನ ಅರ್ಚಕರಾದ ಮಾಧವ ಭಟ್,ಕೃಷ್ಣರಾಜ್ ಮಾರ್ಲ, ತಹಶೀಲ್ದಾರರಾದ ರಶ್ಮಿ.ಎಸ್.ಆರ್,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್,ಪಂಚಾಯತ್ ಪಿಡಿಓ ಶ್ರೀಮತಿ ಪದ್ಮನಾಯ್ಕ್, ತಾ.ಪಂ ಸದಸ್ಯ ಯಶವಂತ್ ಪೊಳಲಿ, ಕೃಷ್ಣಕುಮಾರ್ ಪೂಂಜಾ, ಜಿವರಾಜ್ ಶೆಟ್ಟಿ ಅಮ್ಮುಂಜೆ, ವೆಂಕಟೇಶ್ ನಾವಡ,ಸಂಪತ್ ಕುಮಾರ್ ಶೆಟ್ಟಿ ,ಬಂಟ್ವಾಳ ಪೊಲೀಸ್ ಠಾಣಾಧಿಕಾರಿ ಪ್ರಸನ್ನ, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ,ವಿಧ್ಯಾಚರಣ್ ಭಂಡಾರಿ ಉಪಸ್ಥಿತರಿದ್ದರು.15vp korona sabe (2)

By suddi9

Leave a Reply

Your email address will not be published. Required fields are marked *