ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಕ್ರೀಟಿಕೃತ ವಿವಿಧ ರಸ್ತೆ ಉದ್ಘಾಟನೆಯನ್ನು ಮಂಗಳೂರು ಶಾಸಕ ಡಾ.ವೈ ಭರತ್ ಶೆಟ್ಟಿ ಉದ್ಘಾಟಿಸಿದರು.
25 ಲಕ್ಷ ವೆಚ್ಚದಲ್ಲಿ ಮೊಗರು ಗ್ರಾಮದ ಅಚಾರಿ ಗುಡ್ಡೆ ರಸ್ತೆ, 50 ಲಕ್ಷ ವೆಚ್ಚದಲ್ಲಿ ಬಡಗುಳಿಪಾಡಿ ಮತ್ತು ತೆಂಕುಳಿಪಾಡಿ ಗ್ರಾಮಕ್ಕೆ ಸೇರುವ ಕೈಕಂಬದಿಂದ ಕಾಜಿಲ ಬಿರಾವು ರಸ್ತೆ, 4 ಲಕ್ಷ ವೆಚ್ಚದಲ್ಲಿ ಬಡಗುಳಿಪಾಡಿ ಗ್ರಾಮದ ನಾಡಜೆ ಹಳೆ ಅಂಗನವಾಡಿ ರಸ್ತೆ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ಶಿವರಾಜ್ ನಾರ್ಲ, ಗಂಜಿಮಠ ಪಂಚಾಯತ್ ಸದಸ್ಯ ನೋಣಯ್ಯ ಕೋಟ್ಯಾನ್, ಮಾಧವ ಕಾಜಿಲ, ಮಲ್ಲಿಕಾ ಶೆಟ್ಟಿ ಮಟ್ಟಿ, ಗೀತಾ, ಸಂದೀಪ್ ಶೆಟ್ಟಿ, ಜಯಾನಂದ ಕುಲಾಲ್, ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

