ಯುವವಾಹಿನಿ (ರಿ.) ಬಜ್ಪೆ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ(ರಿ.) ಬಜ್ಪೆ – ಕರಂಬಾರು ಇದರ ಜಂಟಿ ಆಶ್ರಯದಲ್ಲಿ ರಿಪ್ಲೆಕ್ಸೋಲಜಿ, ಮ್ಯಾಗ್ನೆಟ್ ಮತ್ತು ವೈಬ್ರೇಶನ್ ತೆರಪಿ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭ ಬಜ್ಪೆಯ ಬ್ರಹ್ಮಶ್ರೀ ನಾರಯಣಗುರು ಸಮುದಾಯ ಭವನ ಇಲ್ಲಿ  ಫೆ23ರಂದು ನೆರವೇರಿತು.

IMG20200223091109 ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಖ್ಯಾತ ವಾಸ್ತು ತಜ್ಞರಾದ ಶ್ರೀ ಶಾಂತಪ್ಪ ಮುಗ್ದಾಲ್ ಇವರು ಉದ್ಘಾಟಿಸಿ ಶಿಬಿರದ ಸದುಪಯೋಗವನ್ನು ಪಡೆಯುವಂತೆ ವಿನಂತಿಸಿದರು. ಡಾ. ಪ್ರೇಮ್ ಜಕಾರ್ ಇವರು ಶಿಬಿರದಿಂದ ಆಗುವಂತಹ ಉಪಯೋಗವನ್ನು ಸವಿಸ್ತಾರವಾಗಿ ವಿವರಿಸಿದರು.

IMG20200223091435ವೇದಿಕೆಯಲ್ಲಿ ಬಿಲ್ಲವ ಸಂಘ ಬಜ್ಪೆ ಇದರ ಕಾರ್ಯದರ್ಶಿಯಾದ ಶಿವರಾಮ್ ಪೂಜಾರಿ, ಯುವವಾಹಿನಿ ಬಜ್ಪೆ ಘಟಕದ ಅಧ್ಯಕ್ಷರಾದ ಯೋಗೀಶ್ ಪೂಜಾರಿ, ಜತೆ ಕಾರ್ಯದರ್ಶಿ ಪ್ರಜ್ವಿನಿ ಮಿತೇಶ್, ಕ್ರೀಡಾ ಮತ್ತು ಆರೋಗ್ಯ ನಿರ್ದೇಶಕರಾದ ನಿತೇಶ್ ಕುಮಾರ್, ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಗಣೇಶ್ ಅರ್ಬಿ ಉಪಸ್ಥಿತರಿದ್ದರು. ವಿನಯ್ ಕುಮಾರ್ ಅದ್ಯಪಾಡಿ ಕಾರ್ಯಕ್ರಮ ನಿರೂಪಿಸಿದರು ದೇವರಾಜ್ ಅಮೀನ್ ಪ್ರಾರ್ಥಿಸಿದರು.

IMG-20200223-WA0002ಪ್ರಜ್ವಿಣಿ ಮಿತೇಶ್ ಧನ್ಯವಾದ ಗೈದರು. ಒಟ್ಟು ಸುಮಾರು 50 ಮಂದಿ ಶಿಬಿರಾರ್ಥಿಗಳು ಮೊದಲ ದಿನದ ನೋಂದಾವಣೆಯ ಮುಖಾಂತರ ಶಿಬಿರದ ಪ್ರಯೋಜನ ಪಡೆದುಕೊಂಡರು. ಇನ್ನೂ 7 ದಿನಗಳ ಕಾಲ ಈ ಶಿಬಿರ ನಡೆಯಲಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯಬಹುದಾಗಿದೆ.

By suddi9

Leave a Reply

Your email address will not be published. Required fields are marked *