ಕಿನ್ನಿಗೋಳಿ:ಶುಕ್ರವಾರ ಮದ್ಯಾಹ್ನ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಬಲ್ಲಾಣ ಮಾರಡ್ಕ ಸಮೀಪದ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಿಡ ಮರಗಳು ಬೆಂಕಿಗಾಹುತಿಯಾಗಿದೆ.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್ ಸಿಕ್ವೇರಾ, ಸಮೀಪದ ರಾಕಿ ಡಿಸೋಜ ಮತ್ತಿತರರು ಬೆಂಕಿ ನಂದಿಸಿದರು ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಸಮೀಪದ ಇಪ್ಪತ್ತು ಎಕರೆ ಕಾಡು ಪ್ರದೇಶ ಬೆಂಕಿಗೆ ಆಹುತಿ ಆಗುವುದು ತಪ್ಪಿತ್ತು..
