ಕಿನ್ನಿಗೋಳಿ:ಭೂಮಿ ತಾಯಿಯ ಆರಾಧನೆ, ನಮ್ಮ ಆರೋಗ್ಯದ ಚಿಂತನೆಯ ಹಿಂದೆ ಕೆಡ್ಡಸ ಎಂಬ ವಿಶಿಷ್ಠ ಆಚರಣೆಯಲ್ಲಿದೆ. ನಮ್ಮ ತುಳುನಾಡಿನ ಆರಾಧನೆ ಮತ್ತು ಆಚರಣೆಗಳ ಹಿನ್ನಲೆಯ ವೈಜ್ಞಾನಿಕ ಸತ್ಯಗಳನ್ನು ಇಂದಿನ ಯುವ ಜನಾಂಗಕ್ಕೆ ಹಾಗೂ ತುಳುನಾಡಿನ ಜನರಿಗೆ ತಿಳಿಹೇಳುವ ಅಗತ್ಯತೆ ಇದೆ ಎಂದು ತುಳು ಜನಪದ ವಿದ್ವಾಂಸ ಡಾ. ವೈ. ಎನ್. ಶೆಟ್ಟಿ ಹೇಳಿದರು.

17KinniKeddasa
ಮೂಲ್ಕಿ ವಲಯ ಪತ್ರಕರ್ತರ ಸಮೂಹ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮೂಲ್ಕಿ ವಲಯದ ಸಹಯೋಗದಲ್ಲಿ ಕಿನ್ನಿಗೋಳಿ ಗಣೇಶೋತ್ಸವ ಸಮಿತಿಯ ವಸಂತ ಮಂಟಪದ ಬಳಿ ನಡೆದ ಕೆಡ್ಡಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ ಕೆಡ್ಡಸದ ಸಮಯ ತಿನ್ನುವ ಕುಡುಅರಿ ಎಲ್ಲ ರೀತಿಯ ಪೌಷ್ಟಿಕಾಂಶಗಳಿಂದ ಕೂಡಿದ್ದು, ಸುಣ್ಣದ ಅಂಶ ಇರುವ ತಿನಿಸು ಆಗಿದ್ದು ಮಾನವನ ಮೂಳೆಗಳಿಗೆ ಅತ್ಯಂತ ಹೆಚ್ಚಿನ ಪೌಷ್ಠಿಕ ನೀಡುವ ಮದ್ದು ಕೂಡಾ ಆಗಿದೆ. ಕುಡುಅರಿ ತಿಂದಿನಾಯೆಗ್ ಎಲುಕುಟ್ಟೆ ಪತ್ತುಜಿ ಎಂಬ ತುಳು ನಾಡಿನ ಆಡು ಭಾಷೆಯಲ್ಲಿ ಪ್ರಚಲಿತವಾಗಿದೆ. ತಮಿಳುನಾಡಿನಲ್ಲೂ ಈ ಆಚರಣೆ ಇದ್ದು ಸ್ವಲ್ಪ ವಿಭಿನ್ನವಾಗಿದೆ. ಹಿಂದಿನ ದಿನಗಳಲ್ಲಿ ಮಣ್ಣಿನ ಪಾತ್ರೆಯನ್ನೆ ಬಳಸುತ್ತಿದ್ದ ಜನರು ಹಲವು ವರ್ಷಗಳಿಂದ ಅಲುಮಿನಿಯಂ ಪಾತ್ರೆಗಳನ್ನು ಬಳಸಿ ಮಾಡಿದ ಪದಾರ್ಥಗಳನ್ನು ತಿಂದು ಥೈರಾಯ್ಡ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಮಣ್ಣಿನ ಪಾತ್ರೆಯೇ ಒಳ್ಳೆಯದು ಎಂದು ಅದಕ್ಕೆ ಮರಳುವ ದಿನಗಳು ಬಂದಿವೆ. ಎಂದು ಡಾ. ವೈ. ಎನ್. ಶೆಟ್ಟಿ ಹೇಳಿದರು.ಬಾಕ್ಸ್ಪಾಶ್ಚಿಮಾತ್ಯ ಕಂಪೆನಿಗಳು ತುಳುನಾಡಿನ ಹಲವು ಪದಾರ್ಥ ತಿಂಡಿ ತಿನಸುಗಳ ಮಾಡುವ ವಿಧಾನವನ್ನು ಬಳಸಿ ಪೇಟೆಂಟ್ ಪಡೆದು ನಮಗೆ ಉಣ ಬಡಿಸುತ್ತಿದ್ದಾರೆ. ಬಾಕ್ಸ್ ಪುಟ್ಟ ಒಲೆಯಲ್ಲಿ ಬೆಂಕಿ ಉರಿಸಿ, ಬಾಣಲೆಯಲ್ಲಿ ಅಕ್ಕಿ, ಕುಡು, ಕಡಲೆ, ಹೆಸರು, ತೆಂಗಿನಕಾಯಿ ತುಂಡು ಹಾಗೂ ವಿವಿಧ ಧಾನ್ಯಗಳನ್ನು ಹಾಕಿ, ಹುರಿದು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಹಳೆಯಂಗಡಿ ಪೂಜಾ ಆರೇಂಜರ್ಸ್ ಮಾಲಕ ಜಯಕೃಷ್ಣ ಕೋಟ್ಯಾನ್, ಉದ್ಯಮಿ ಧನಂಜಯ ಶೆಟ್ಟಿಗಾರ್ ಸಾಗರಿಕಾ ಪಕ್ಷಿಕೆರೆ, ಪತ್ರಕರ್ತರ ಸಮೂಹದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮೂಲ್ಕಿ ವಲಯದ ನವೀನ್‍ಚಂದ್ರ ಉಪಸ್ಥಿತರಿದ್ದರು. ನವೀನ್ ಕುಮಾರ್ ಕಟೀಲ್ ಸ್ವಾಗತಿಸಿದರು. ರಘುನಾಥ್ ಕಾಮತ್ ವಂದಿಸಿದರು. ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಭಿಕರಿಗೆ ಕುಡುಅರಿ ಹಾಗೂ ಕಾಮ ಕಸ್ತೂರಿ ಪಾನಕ ಹಂಚಲಾಯಿತು.

By Suddi9

Leave a Reply

Your email address will not be published. Required fields are marked *