ಕೈಕಂಬ:ಕುಪ್ಪೆಪದವು:ಮೆಸ್ಕಾಂ ನ ಗುರುಪುರ ಕೈಕಂಬ ಉಪ ವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯು ಕೈಕಂಬ ಮೆಗಾ ಪ್ಲಾಜಾ ಸಭಾಭವನದಲ್ಲಿ ಸೋಮವಾರ ನಡೆಯಿತು,ಸಭೆಯಲ್ಲಿ ಮಾತನಾಡಿದ ಜಿಲ್ಲಾಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆದು ರೈತರು  ,ಸಂಬಂಧ ಪಟ್ಟ ಗ್ರಾಮಪಂಚಾಯತ್ ಪಿಡಿಓ ಗಳ ನಿರಾಕ್ಷೇಪಣಾ ಪತ್ರ ನೀಡಿದ್ದರೂ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಇದಕ್ಕೆ ಉತ್ತರಿಸಿದ ಮೆಸ್ಕಾಂ ಸುಪರಿಡೆಂಟ್ ಇಂಜೀನಿಯರ್  ಮಂಜಪ್ಪ ಅವರು ,ನಿಯಮಾವಳಿಗಳ ಪ್ರಕಾರ ಸಾರ್ವಜನಿಕ ಕುಡಿಯುವ ನೀರಿನ ಕೊಳವೆ ಬಾವಿಗಳಿಂದ 250 ಮೀಟರ್ ಒಳಗಡೆ ಬೇರೆ ಯಾವುದೇ ಉದ್ದೇಶದ ಬೋರ್ ವೆಲ್ ಗಳಿಗೆ ಸಂಪರ್ಕನೀಡುವಂತಿಲ್ಲ ,
IMG-20200217-WA0004
ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದರೆ ಮಾತ್ರ ಸಂಪರ್ಕ ನೀಡಲು ಸಾಧ್ಯ ,ನೀವು ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿ ಎಂದರು,ಹಲವಾರು ಕಡೆ 250 ಮೀಟರ್ ಒಳಗಡೆ ಇರುವ ಕೊಳವೆ ಬಾವಿಗಳಿಗೆ ಸಂಪರ್ಕ ನೀಡಲಾಗಿದೆ ,ಈ ವಿಚಾರದಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ,ಕೃಷಿ ಉದ್ದೇಶಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಮಂಜೂರಾಗಿ ಕೊರೆದಿರುವ ಕೊಳವೆ ಬಾವಿಗಳಿಗಳಿಗೆ ಸಂಪರ್ಕ ನೀಡಿ ರೈತರ ಸಮಸ್ಯೆಯನ್ನು ಪರಿಹರಿಸಿ  ಎಂದು ಗ್ರಾಹಕರು ಆಗ್ರಹಿಸಿದರು,ವಿದ್ಯುತ್ ಸಂಪರ್ಕ ಪಡೆಯುವಾಗ ಡೆಪಾಸಿಟ್ ಕಟ್ಟುತ್ತೇವೆ ,ಪ್ರತೀ ತಿಂಗಳು ಬಿಲ್ ಪಾವತಿ ಮಾಡುತ್ತೇವೆ ಆದರೂ ಬಿಲ್ಲಿನಲ್ಲಿ ನಿಗದಿತ ಶುಲ್ಕ ವಿಧಿಸಲಾಗುತ್ತಿದೆ ,ಕೋಳಿ ಫಾರಂ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಉದ್ದಿಮೆ ಪರವಾನಿಗೆ ಕೇಳುತ್ತೀರಿ ಯಾಕೆ, ಕೋಳಿ ಸಾಕಾಣಿಕೆ ಕೃಷಿ ಚಟುವಟಿಕೆ ಅಲ್ಲವೇ   ಎಂದು ರೈತರೊಬ್ಬರ ಪ್ರಶ್ನೆ ಗೆ ಉತ್ತರಿಸಿದ ,ಎಸ್ .ಇ.ಯವರು ವಿದ್ಯುತ್ ಆಯೋಗ ನಿಗದಿಪಡಿಸಿದ ನಿಯಮಗಳ ಅನುಸಾರ ನಾವು ವಿದ್ಯುತ್ ಶುಲ್ಕ ನಿಗದಿ ಪಡಿಸುತ್ತೇವೆ ಅಲ್ಲದೆ ಸಂಪರ್ಕ ನೀಡಲು ಪಡೆಯಬೇಕಾದ ಧಾಖಲೆ ಗಳಿಗೂ ನಿಯಮಾವಳಿಗಳಿವೆ ಅದರಂತೆ ಮೆಸ್ಕಾಂ ಕೆಲಸ ಮಾಡುತ್ತದೆ ಎಂದರು ,ಎಡಪದವಿನ ರೈತರೊಬ್ಬರು ತನ್ನ ಅದಿಕೆ ತೋಟದ ಒಳಗಡೆಯಿಂದ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು ,ತೋಟಗಳ ನಡುವೆ ಹಾದುಹೋಗಿರುವ ವಿದ್ಯುತ್ ತಂತಿ ಗಳಿಂದ ತೊಂದರೆಯಾಗುತ್ತಿದೆ ಅಲ್ಲದೆ ಜೀವಹಾನಿಗೂ ಕಾರಣವಾಗುತ್ತಿದೆ ,ಹಳೆಯ ತಂತಿಗಳ ಬದಲಾವಣೆ ಸಂದರ್ಭದಲ್ಲಿ ತೋಟಗಳ ಒಳಗೆ ಹಾದು ಹೋಗಿರುವ ತಂತಿಗಳನ್ನು ಮೆಸ್ಕಾಂ ,ರೈತರಿಂದ ಶುಲ್ಕ ಪಡೆಯದೇ ಸ್ಥಳಾಂತರಿಸಬೇಕೆಂದು ಒತ್ತಾಯ ಕೇಳಿಬಂತು ,ಬೀದಿದೀಪಗಳು ಹಗಲಿಡೀ ಉರಿಯುತ್ತವೆ ಅಲ್ಲದೆ ಅನಗತ್ಯ ಸ್ಥಳಗಳಲ್ಲೂ ದೀಪಗಳು ಉರಿಯುತ್ತವೆ ಎಂದು ಗ್ರಾಹಕರು ದೂರಿದರು ,ಈ  ಬಗ್ಗೆ ಗಮನಹರಿಸುವಂತೆ ಜೆ.ಇ.ಗಳಿಗೆ ಎಸ್ .ಇ.ಮಂಜಪ್ಪಅವರು   ಸೂಚಿಸಿದರು. ಕೈಕಂಬ ಉಪವಿಭಾಗ ವ್ಯಾಪ್ತಿಯ ಗ್ರಾಮಪಂಚಾಯತ್ ಗಳ ಅಧ್ಯಕ್ಷರುಗಳು ,ಉಪಾಧ್ಯಕ್ಷರುಗಳು ,ಸದಸ್ಯರು ,ಮೆಸ್ಕಾಂ ನ ಅಧಿಕಾರಿಗಳಾದ ತಿಮ್ಮಪ್ಪ ಗೌಡ.ಸಂತೋಷ್ ,ಜೆ.ಇ.ಗಳುಸಭೆಯಲ್ಲಿ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *