ಕಟೀಲು:ಏಕಾಗ್ರಚಿತ್ತದಿಂದ ದೇವರನ್ನು ಪ್ರಾರ್ಥಿಸಿದರೆ ಕಲ್ಲು ದೇವರಾಗುತ್ತಾರೆ. ಸತ್ಕರ್ಮಗಳಿಂದ ನಮ್ಮ ಸಂಸ್ಕ್ರತಿ ಸಂಸ್ಕಾರ ಆಚಾರ ವಿಚಾರಗಳು ಇತರರಿಗೆ ಮಾದರಿಯಗಬೇಕು ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭ್ರಾಮರೀ ಸಭಾಂಗಣದಲ್ಲಿ ಮಂಗಳವಾರ ನಡೆದ 7 ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಮಾತನಾಡಿದರು.

ಶುದ್ದ ಮನಸ್ಸಿನ ಭಗವಂತನನ್ನು ಒಲೈಸುವುದರಿಂದ ನಮ್ಮ ಮನಸ್ಸು ಸ್ವಚ್ಚಗೊಳ್ಳುವುದು ಎಂದು ಮಂಗಳೂರು ಮಂಗಳಾದೇವಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು.
ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರು ಶಿಕ್ಷಣದೊಂದಿಗೆ ಸಂಸ್ಕಾರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಅನುಕರಣೆ ಶಾಪವಾಗಿದೆ ಶಿಕ್ಷಣಕ್ಕೆ ಮುಖ್ಯವಾಗಿ ಬೇಕಾದದ್ದು ಸಂಸ್ಕಾರ ಎಂದರು.
ಮೂಲ್ಕಿ ವೆಂಕಟರಮಣ ದೇವಳ ಮೊಕ್ತೇಸರ ಅತುಲ್ ಎ. ಕುಡ್ವ ಅಧ್ಯಕ್ಷತೆ ವಹಿಸಿದರು
ಮಾಣಿಲ ಮೋಹನದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪದ್ಮನಾಭ ತಂತ್ರಿ ಆಲಂಪಾಡಿ, ಧರ್ಮಸ್ಥಳ ಮಂಜುನಾಥ ದೇವಳದ ಅರ್ಚಕ ಈಶ್ವರ ಪೆರ್ಲತ್ತಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಅಮ್ಮನವರ ಸನ್ನಿಧಿಯ ಅರ್ಚಕ ರಾಮಕೃಷ್ಣ ಕಲ್ಲೂರಾಯ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ಎಕ್ಸ್ಪರ್ಟ್ ವಿದ್ಯಾ ಸಂಸ್ಥೆ ಅಧ್ಯಕ್ಷ ಎಲ್ ನರೇಂದ್ರ ನಾಯಕ್, ಅಭಿಜಿತ್ ವಿ,ಶೇಟ್, ದಾವಣಗೆರೆ ಪದ್ದು ಕಾಫಿ ಬಾರ್ನ ಕಟೀಲು ಪದ್ಮನಾಭ ಭಟ್, ಪಾಡ್ದನ ಕೋಗಿಲೆ ಗಿಡಿಗೆರೆ ರಾಮಕ್ಕ, ಉದ್ಯಮಿಗಳಾದ ಐಕಳ ಆನಂದ ಶೆಟ್ಟಿ, ಅತ್ತೂರು ಕುಡ್ತಿಮಾರುಗುತ್ತು ಭಾಸ್ಕರ ಶೆಟ್ಟಿ, ದೇರಳಕಟ್ಟೆ ಅಯ್ಯಪ್ಪಸ್ವಾಮಿ ಸೀತಾರಾಮ ಶೆಟ್ಟಿ, ಬಂಟ್ವಾಳ ದಂಡಗೋಳಿ ಮಹಾಗಣಪತಿ ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ ಜೈನ್, ಉದ್ಯಮಿಗಳಾದ ಮುಡಿಪು ಚಂದ್ರಶೇಖರ ಗಟ್ಟಿ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಹಾಗೂ ಕಟೀಲು ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಐಕಳ ಹರೀಶ್ ಶೆಟ್ಟಿ, ಅಬುದಾಬಿ ಅರಬ್ ಉಡುಪಿ ಗ್ರೂಪ್ ಆಫ್ ಹೊಟೇಲ್ಸ್ ಕಳತ್ತೂರು ಶೇಖರ ಶೆಟ್ಟಿ, ಪುತ್ತೂರು ಪ್ರಸಿದ್ಧ ಜೋತಿಷ್ಯ ಹರಿವೈಲಾಯ, ಮಂಗಳೂರು ಅಗ್ರಜಾ ಬಿಲ್ಡರ್ಸ್ನ ಸಂದೇಶ್ ಶೆಟ್ಟಿ, ಕಿನ್ನಿಗೋಳಿ ಉದ್ಯಮಿಗಳಾದ ಕೊಡೆತ್ತೂರು ದೇವಸ್ಯ ಸುರೇಶ್ ಶೆಟ್ಟಿ, ಕೊಡೆತ್ತೂರು ಪುರುಷೋತ್ತಮ ಶೆಟ್ಟಿ, ಸಂಜೀವ ಶೆಟ್ಟಿ, ಬಿಪಿನ್ ಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ವಿಶ್ವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ದಾನಿಗಳನ್ನು ಗೌರವಿಸಲಾಯಿತು.
ಕಟೀಲು ದೇವಳದ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸ್ತಾವನೆಗೈದು ಸ್ವಾಗತಿಸಿದರು, ದಯಾನಂದ ಕಟೀಲು ಪರಿಚಯಿಸಿದರು, ಶರಣ್ ಪಂಪ್ವೆಲ್ ವಂದಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
