ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜನವರಿ 22ರಿಂದ ಫೆಬ್ರವರಿ 3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ನೂತನ ಸುವರ್ಣ ಧ್ವಜ ಸ್ತಂಭ ಪ್ರತಿಷ್ಠೆ, ಧ್ವಜ ಕಲಶಾಭಿಷೇಕ, ಗರ್ಭಗುಡಿಯ ಮೇಲಿನ ಶಿಖರ ಕಲಶ ಪ್ರತಿಷ್ಠೆ, ತೀರ್ಥ ಮಂಟಪದ ಕಲಶ ಪ್ರತಿಷ್ಟೆಯು ನಡೆಯಿತು.
ಧ್ವಜಸ್ತಂಭಕ್ಕಾಗಿ ಸಾಗುವಾನಿ ಮರವನ್ನು ಸುಮಾರು 2 ವರ್ಷ ಕಾಲ ಎಣ್ಣೆಯಲ್ಲಿ ಹಾಕಿ ಇಟ್ಟು ದೇವಳದ ವತಿಯಿಂದ ದೇವಳದ ಭಕ್ತರು ನೀಡಿದ 8 ಕೆ. ಜಿ ಚಿನ್ನದಿಂದ ಚಿನ್ನದ ಲೇಪನ ಹಾಗೂ ಕೆಳಗಿನ ಪೀಠಕ್ಕೂ ಚಿನ್ನದ ಲೇಪನ ಮಾಡಲಾಗಿದೆ.
ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವದಲ್ಲಿ ಶಿಬರೂರು ಕೃಷ್ಣರಾಜ ತಂತ್ರಿಗಳ ಸಹಯೋಗದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ದೇವಳದ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಅನುವಂಶಿಕ ಮೊಕ್ತೇಸರ ಸನತ್‍ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಶ್ರೀಹರಿನಾರಾಯಣದಾಸ ಆಸ್ರಣ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಗೌರವಾಧ್ಯಕ್ಷ ಉಮಾನಾಥ ಕೋಟ್ಯಾನ್, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್‍ಚಂದ್ರ ಶೆಟ್ಟಿ, ಮುಂಬಯಿ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕರ್ನಿರೆ ವಿಶ್ವನಾಥ ಶೆಟ್ಟಿ, ಧ್ವಜಸ್ತಂಭದ ಕೊಡುಗೆ ನೀಡಿದ ಕೊಡೆತ್ತೂರು ಮಾಗಂದಡಿ ಯಜಮಾನ ಪಾಂಡುರಂಗ ಶೆಟ್ಟಿ, ದೇವದತ್ತ ಶೆಟ್ಟಿ, ನಿರಂಜನ ಶೆಟ್ಟಿ, ರಾಜೇಂದ್ರ ಶೆಟ್ಟಿ, ಜಗದೀಶ ಆಳ್ವ, ಶ್ರೀಧರ ಆಳ್ವ, ಹರ್ಷರಾಜ ಶೆಟ್ಟಿ ಜಿ. ಎಮ್, ಅನಿಲ್ ಕುಮಾರ್ ಶೆಟ್ಟಿ, ಕಿರಣ್ ಶೆಟ್ಟಿ, ನಿತಿನ್ ಶೆಟ್ಟಿ ಮತ್ತಿತತರು ಉಪಸ್ಥಿತರಿದ್ದರು.

