ಬಜ್ಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್ ನಮ್ಮಟಿವಿ ಸಹಯೋಗದೊಂದಿಗೆ ‘ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ’ ಎಂಬ ಜನಪ್ರತಿನಿಧಿಗಳೊಂದಿಗೆ ನೇರವಾಗಿ ಜನರು ಸಂವಾದ ಮಾಡುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರನ್ನು ಈ ಸಂವಾದ ಕಾರ್ಯಕ್ರಮಕ್ಕೆ ಆಹ್ವಾನಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅನುಕ್ರಮವಾಗಿ ಎಂಟು ಮತ್ತು ಐದು ಕ್ಷೇತ್ರಗಳಿದ್ದು, ಎಲ್ಲ ಹದಿಮೂರು ವಿಧಾನಸಭಾ ಕ್ಷೇತ್ರಗಳ ಶಾಸಕರನ್ನು ಸಂವಾದಕ್ಕೆ ಆಹ್ವಾಟಿಸಲಾಗಿದೆ. ಸಂವಾದದಲ್ಲಿ ದಕ್ಷಿಣಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಬಿ. ರಮಾನಾಥ ರೈ, ಬಂಟ್ವಾಳ ಶಾಸಕರು ಮತ್ತು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಯು. ಟಿ. ಖಾದರ್, ಮಂಗಳೂರು ಶಾಸಕರು ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಸಚಿವರು, ಅಭಯಚಂದ್ರ ಜೈನ್, ಮೂಡಬಿದಿರೆ ಶಾಸಕರು ಮತ್ತು ಯುವಜನಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವರು, ಜೆ.ಆರ್.ಲೋಬೊ, ಶಾಸಕರು ಮಂಗಳೂರು ನಗರ ದಕ್ಷಿಣ, ಮೊಯ್ದೀನ್ ಬಾವ, ಶಾಸಕರು ಮಂಗಳೂರು ನಗರ ಉತ್ತರ, ಶಕುಂತಳಾ ಶೆಟ್ಟಿ, ಶಾಸಕರು ಪುತ್ತೂರು, ಎಸ್. ಅಂಗಾರ, ಶಾಸಕರು ಸುಳ್ಯ, ವಸಂತ ಬಂಗೇರ, ಶಾಸಕರು ಬೆಳ್ತಂಗಡಿ ಹಾಗೂ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ವಿನಯ ಕುಮಾರ ಸೊರಕೆ, ಶಾಸಕರು ಕಾಪು ಮತ್ತು ನಗರಾಭಿವೃದ್ಧಿ ಸಚಿವರು, ಪ್ರಮೋದ್ ಮಧ್ವರಾಜ್, ಶಾಸಕರು ಉಡುಪಿ, ಗೋಪಾಲ ಭಂಡಾರಿ, ಶಾಸಕರ ಬೈಂದೂರು, ಸುಟಿಲ್ ಕುಮಾರ್, ಶಾಸಕರು ಕಾರ್ಕಳ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು ಕುಂದಾಪುರ ಭಾಗವಹಿಸಲಿದ್ದಾರೆ.
ಮೊಟ್ಟ ಮೊದಲ ಸಂವಾದ ಕಾರ್ಯಕ್ರಮವು 2014 ಫೆಬ್ರುವರಿ 15ರಂದು ಶನಿವಾರ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು ಇಲ್ಲಿ ನಡೆಯಲಿದೆ. ಮೊದಲಿಗೆ ಸಂಜೆ 4.00ರಿಂದ 6.00ರ ತನಕ ನಡೆಯುವ ಸಂವಾದದಲ್ಲಿ ಮಂಗಳೂರು ನಗರ ಉತ್ತರ ಶಾಸಕ ಮೊಯ್ದೀನ್ ಬಾವ ಅವರು ಭಾಗವಹಿಸುವರು. ಅನಂತರ, ಸಂಜೆ ಗಂಟೆ 7ರಿಂದ 9ರ ತನಕ ನಡೆಯುವ ಸಂವಾದದಲ್ಲಿ ಸಚಿವ ಅಭಯಚಂದ್ರ ಅವರು ಭಾಗವಹಿಸುವರು.
ಇನ್ನುಳಿದ ಹನ್ನೊಂದು ವಿಧಾನಸಭಾ ಕ್ಷೇತ್ರಗಳ ಶಾಸಕರ ಸಂವಾದ ಕಾರ್ಯಕ್ರಮವು ಆಯಾಯ ವಿಧಾನಸಭಾ ಕ್ಷೇತ್ರದಲ್ಲೇ ಆಯೋಜಿಸಲಾಗುವುದು. ಈ ಬಗ್ಗೆ ಮಾಹಿತಿಯನ್ನು ಕಾಲ ಕಾಲಕ್ಕೆ ನಮ್ಮಟಿವಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ಭೂತನಾಥೇಶ್ವರ ಟ್ರಸ್ಟ್ ತಿಳಿಸಿದೆ. ಸಂವಾದದಲ್ಲಿ ಆಯಾಯ ಶಾಸಕರ ವಿಧಾನಸಭಾ ಕ್ಷೇತ್ರದಲ್ಲಿ ಸಂವಾದ ಆಯೋಜನೆ ಮಾಡಲಾಗಿದೆ. ಶಾಸಕರು ಕಾರ್ಯಕ್ರಮದ ಮೊದಲಿಗೆ ತಮ್ಮ ಅವಧಿಯ ಸಾಧನೆಯ ವರದಿ ಶಾಸಕರು ಮುಂದಿನ ಹನ್ನೆರಡು ತಿಂಗಳಲ್ಲಿ ನಡೆಸುವ ಕ್ಷೇತ್ರದ ಅಭಿವೃದ್ಧಿ ಯೋಜನೆಯನ್ನು ಶಾಸಕರು ವಿವರಿಸಿಲಿದ್ದಾರೆ. ಸಂವಾದದಲ್ಲಿ ಆಯಾಯ ಕ್ಷೇತ್ರದ ನಾಗರಿಕರು ಮತ್ತು ಮತದಾರರು ಭಾಗವಹಿಸಬಹುದು, ಜನರು ಪ್ರಶ್ನೆಗಳನ್ನು ಲಿಖಿತವಾಗಿ ಆಯಂಕರಿಗೆ ನೀಡಬೇಕು. ಆಯ್ದ ಪ್ರಶ್ನೆಗಳಿಗೆ ಮಾತ್ರ ಅವಕಾಶವಿದ್ದು, ಪ್ರಶ್ನೆಗಳು ಕ್ಷೇತ್ರದ ಅಭಿವೃದ್ಧಿ ಮತ್ತು ಶಾಸಕರ ಸರಕಾರಿ ಕರ್ತವ್ಯಗಳಿಗೆ ಸಂಬಂಧಿಸಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ಸಂವಾದ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ. ಕಾಲ ಕಾಲಕ್ಕೆ ಸಂವಾದ ನಡೆಸುವ ಮೂಲಕ ಜನರು ಮತ್ತು ಜನಪ್ರತಿನಿಧಿಗಳನ್ನು ನಿರಂತರ ಸಂಪರ್ಕದಲ್ಲಿರಿಸಲು ಪ್ರಯತ್ನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ಶೆಟ್ಟಿ,(09821015336)ಯವರನ್ನು ಸಂಪಕರ್ಿಸಲು ಕೋರಲಾಗಿದೆ.




