ಬಂಟ್ವಾಳ : ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಸಹನಾ ಶೆಟ್ಟಿ ಮತ್ತು ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಸೋನಿ ಶೆಟ್ಟಿ ಇವರುಗಳು ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಕರಾಟೆ ಟೂರ್ನಮೆಂಟ್ಗೆ ಆಯ್ಕೆಯಾಗಿರುತ್ತಾರೆ. ದಿನಾಂಕ 8/01/2020ರಿಂದ 13/01/2020ರವರೆಗೆ ಚೆನ್ನೈಯ ಸತ್ಯಭಾಮಾ ವಿಶ್ವವಿದ್ಯಾನಿಲಯದಲ್ಲಿ ಈ ಟೂರ್ನಮೆಂಟ್ ನಡೆಯಲಿದ್ದು ಕಾಲೇಜಿನ ಈ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.


