ಬಂಟ್ವಾಳ:   ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ದಿಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭ ಭಾನುವಾರ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿವಿಧ ಅಭಿವೃದ್ದುಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು ಗ್ರಾಮದ ಅಭಿವೃದ್ದಿಯಲ್ಲಿ ಗ್ರಾಮಸ್ಥರ ಸಹಭಾಗಿತ್ವವು ಅತೀ ಅಗತ್ಯವಾಗಿದೆ ಎಂದರು.
IMG-20200105-WA0038
ಇದೇವೇಳೆ  ಬಡಕಬೈಲು ಕುಟ್ಟಿಕಳ ಬಳಿ ಸಂರಕ್ಷಣಾ ತಡೆಗೋಡೆಯ  40 ಲಕ್ಷ ರೂ.ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು  ನೆರೆವೇರಿಸಲಾಯಿತು.ಹಾಗೆಯೇ 5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ  ಗಾಣೆಮಾರ್ ಒಂದನೇ ಅಡ್ಡರಸ್ತೆಯು ಕಾಂಕ್ರೀಟೀಕೃತ ನೂತನ ರಸ್ತೆ,  7 ಲಕ್ಷ ರೂ.ವೆಚ್ಚದಲ್ಲಿ ಮಣಿಕಂಠಪುರ  ಕಾಂಕ್ರೀಟೀಕೃತ ನೂತನ ರಸ್ತೆಯನ್ನು ಶಾಸಕರು ಉದ್ಘಾಟಿಸಲಾಯಿತು.
IMG-20200105-WA0035
IMG-20200105-WA0036
ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ,ತಾ.ಪಂ ಯಶವಂತಪೂಜಾರಿ, ಗ್ರಾಪಂ ಸದಸ್ಯರಾದ ಲೋಕೇಶ್ ಭರಣಿ,ಸುರೇಶ್ ಮಣಿಕಂಠಪುರ, ಶಕುಂತಳಾ,ಪ್ರಮುಖರಾದ ಸಂಕಪ್ಪ ಶೇಕಾ,ಸುಕೇಶ್ ಚೌಟ,ಗೋಪಾಲ್ ಬಂಗೇರಾ,ರಮಾನಾಥ ರಾಯಿ,ಪುರುಷೋತ್ತಮ ಶೆಟ್ಟಿ,ಕಿರಣ್,ಜಯಂತ್ ಮಣಿಕಂಠಪುರ,ಕಾರ್ತಿಕ್ ಬಳ್ಳಾಲ್, ಪುಷ್ಪರಾಜ್,ವಿಶ್ವನಾಥ್,ಗಣಪ ಪೂಜಾರಿ,ಲಿಂಗಪ್ಪಮುಖಾರಿ,ಚರಣ್, ಅಶೋಕ್ ಬಡಕಬೈಲು,ನಾರಾಯಣ್ ಬಡಕಬೈಲು,ಪ್ರಣಾಮ್ ಶೆಟ್ಟಿ ,ಸಂದೀಪ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *