ಬಂಟ್ವಾಳ: ಶಾಸಕರ ನಿಧಿಯಿಂದ ಬಡಕಬೈಲಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಆಟೋರಿಕ್ಷಾ ನಿಲ್ದಾಣವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾನುವಾರ ಉದ್ಘಾಟಿಸಿದರು‌. ಬಳಿಕ ಮಾತನಾಡಿದ ಶಾಸಕರು ಸಾರ್ವಜನಿಕ ಸೇವೆಯಲ್ಲಿರುವ  ರಿಕ್ಷಾ ಚಾಲಕ-ಮಾಲಕರು ಜನರೊಂದಿಗೆ ಅನ್ಯೋನ್ಯತೆಯೊಂದಿಗಿರುವುದು  ಸಂತಸದ ವಿಷಯ, ಈ ನಿಟ್ಟಿನಲ್ಲಿ ಇಲ್ಲಿನ ರಿಕ್ಷಾ ಚಾಲಕರ ಸೇವೆ ಶ್ಲಾಘನೀಯವಾಗಿದೆ ಎಂದರು.  ಮುಂದಿನ ದಿನಗಳಲ್ಲಿ ಈ ಪ್ರದೇಶವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದ ಶಾಸಕರು ಈ ಭಾಗದ ಜನರು ಇದೇ ರೀತಿಯಲ್ಲಿ ಸಹಕಾರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ನವೋದಯ ರಿಕ್ಷಾ ಚಾಲಕರ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

IMG-20200105-WA0042

IMG-20200105-WA0043

ಅಟೋರಿಕ್ಷಾ ಚಾಲಕರಾದ ಶೇಖರ್, ನವಾಝ್,ಕರಿಯಂಗಳ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ,ತಾ.ಪಂ ಯಶವಂತ ಪೂಜಾರಿ,ಗ್ರಾಪಂ ಸದಸ್ಯರಾದ ಲೋಕೇಶ್ ಭರಣಿ,ಸುರೇಶ್ ಮಣಿಕಂಠಪುರ, ಶಕುಂತಳಾ,ಪ್ರಮುಖರಾದ ಸಂಕಪ್ಪ ಶೇಕಾ,ಸುಕೇಶ್ ಚೌಟ,ಗೋಪಾಲ್ ಬಂಗೇರಾ,ರಮಾನಾಥ ರಾಯಿ,ಪುರುಷೋತ್ತಮ ಶೆಟ್ಟಿ,ಕಿರಣ್,ಜಯಂತ್ ಮಣಿಕಂಠಪುರ,ಕಾರ್ತಿಕ್ ಬಳ್ಳಾಲ್,ಪುಷ್ಪರಾಜ್, ವಿಶ್ವನಾಥ್,ಬಶೀರ್,ಸುರದಾಸ್,ಶೇಖ್ ಮೋನು,ಗಣಪ ಪೂಜಾರಿ,ಲಿಂಗಪ್ಪ ಮುಖಾರಿ,ಚರಣ್,ಅಶೋಕ್ ಬಡಕಬೈಲು,ನಾರಾಯಣ್ ಬಡಕಬೈಲು,ಪ್ರಣಾಮ್ ಶೆಟ್ಟಿ ,ಸಂದೀಪ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *