ಬೆಂಗಳೂರು: ಇರಾನ್ – ಅಮೆರಿಕ ನಡುವೆ ನಡೆಯುತ್ತಿರುವ ದಾಳಿಯ ಪರಿಣಾಮ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಅಂತಾರಾಷ್ಟ್ರೀಯ ಕಚ್ಚಾತೈಲದ ಮೇಲೆ ಭಾರಿ ಪರಿಣಾಮ ಬೀರಿದ್ದು, ಶೇ.4 ರಷ್ಟು ಏರಿಕೆ ಕಂಡಿದೆ. ಇದರ ಜೊತೆಗೆ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಮುಗಿಲು ಮುಟ್ಟುತ್ತಿದೆ. ಈಗಾಗಲೆ  ದೇಶದಲ್ಲಿ ತೈಲ ರಫ್ತ್ತು ಇಳಿಮುಖವಾಗಿದ್ದು, ಕಳೆದ ವಾರದಿಂದ ಪ್ರತಿದಿನ 10 ಪೈಸೆಯಂತೆ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇದೆ.

180606093823-us-iran-flags (1)

ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬ್ಯಾರಲ್‌ ಒಂದಕ್ಕೆ 4,509 ರೂ. ಷ್ಟು ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್ ನ‌ ದರ 78.07 ರೂ. ಇದ್ದು ಒಂದೇ ವಾರದಲ್ಲಿ 73 ಪೈಸೆಯಷ್ಟು ಏರಿಕೆ ಕಂಡಿದೆ. ಡೀಸೆಲ್‌ ದರ 70.79 ರೂ. ಆಗಿದ್ದು, ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 75.54 ರೂ. ಹಾಗು ಡೀಸೆಲ್ ಬೆಲೆ 68.51 ರೂ. ಇದೆ. ಕೋಲ್ಕತದಲ್ಲಿ ಪೆಟ್ರೋಲ್ ಬೆಲೆ 78.13 ರೂ. ಹಾಗೂ ಡೀಸೆಲ್ ಬೆಲೆ 70.87 ರೂ,ಹೆಚ್ಚಳ ಕಂಡಿದೆ, ಇನ್ನು ಮುಂಬಯಿನಲ್ಲಿ ಪೆಟ್ರೋಲ್ ಬೆಲೆ 81 ದಾಟಿದೆ ಹಾಗೂ ಡೀಸೆಲ್ ಬೆಲೆ 71.84 ರೂ. ಇದೆ. ಅಲ್ಲದೆ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 78.48 ರೂ. ಇದೆ. ಹಾಗೂ ಡೀಸೆಲ್ ಬೆಲೆ 72.39 ರೂ. ರಷ್ಟು ಹೆಚ್ಚಳ ಕಂಡಿದೆ.

By suddi9

Leave a Reply

Your email address will not be published. Required fields are marked *