ಬಂಟ್ವಾಳ : ಜೀವನ ಪರಿವರ್ತನೆಯ ಸೌಲ`್ಯ ಬ್ಯಾಂಕಿಂಗ್ ಸೇವೆಯಿಂದ ದೊರೆಯುತ್ತದೆ. ಬ್ಯಾಂಕಿಂಗ್ ಸೇವೆಯಿಂದ ವಂಚಿತರಾದ ಗ್ರಾಮೀಣ ಪ್ರದೇಶದವರಿಗೆ ಆಥರ್ಿಕ ಚೇತನ ನೀಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ ವಿಜಯ ಬ್ಯಾಂಕ್ ನಡೆಸುತ್ತಿದೆ ಎಂದು ವಿಜಯ ಬ್ಯಾಂಕ್ ಕಾರ್ಯ ನಿರ್ವಹಣಾ ನಿದರ್ೇಶಕ ಕೆ.ಆರ್.ಶೆಣೈ ಅವರು ಹೇಳಿದರು.
vijaya

ಅವರು ಬು`ವಾರ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನಲ್ಲಿ ವಿಜಯ ಬ್ಯಾಂಕ್ನ 1537 ನೇ ಶಾಖೆಯಾದ ಮಂಗಳೂರು ವಲಯದ 75ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ರೈತಾಪಿ ಜನರು, ಸಣ್ಣ ಉದ್ದಿಮೆದಾರರ ಸಹಿತ ಎಲ್ಲಾ ಬಗೆಯ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಒದಗಿಸುವುದು ಸ್ಥಾಪಕರ ಆಶಯವಾಗಿದ್ದು , ಕೇಂದ್ರ ಸರಕಾರದ ಜನ-`ನ ಯೋಜನೆಯ ಎಲ್ಲಾ ಸೇವೆ ಸೌಲ`್ಯ ನೀಡಲು ಬ್ಯಾಂಕ್ ಸಕ್ರಿಯವಾಗಿದೆ. ಪ್ರತಿಯೊಬ್ಬರೂ ಬ್ಯಾಂಕಿಂಗ್ ಹವ್ಯಾಸ ಬೆಳೆಸಿ ಉದ್ಯೋಗ , ಕೃಷಿಯಲ್ಲಿ ಅಭಿವೃದ್ಧಿ ಸಾಸುವ ನಿಟ್ಟಿನಲ್ಲಿ ಎಲ್ಲರ `ರವಸೆಗೆ ವಿಜಯ ಬ್ಯಾಂಕ್ ಸಂಗಾತಿಯಾಗಿದೆ ಎಂದ ಅವರು ಅರ್`ವಾಷರ್ಿಕ ಕೊನೆಯಲ್ಲಿ ಬ್ಯಾಂಕ್ 20 ಲಕ್ಷ ಕೋಟಿ ರೂ. ವ್ಯವಹಾರ ಸಾಸಿದೆ ಎಂದು ಉಲ್ಲೇಖಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಗ್ರಾ.ಪಂ. ಅ`್ಯಕ್ಷ ಎ.ಚೆನ್ನಪ್ಪ ಸಾಲಿಯಾನ್ ಅವರು 1983ರಲ್ಲಿ ಉದಯವಾಣಿಯಿಂದ ಕುಗ್ರಾಮವೆಂದು ಗುರುತಿಸಲ್ಪಟ್ಟ ಉಳಿ ಗ್ರಾಮ ಇಂದು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯ ಸಚಿವ ಬಿ. ರಮಾನಾಥ ರೈ ಅವರ ಮುತುವಜರ್ಿಯಿಂದ ಇದೀಗ ರಾಷ್ಟ್ರೀಕೃತ ಬ್ಯಾಂಕ್ನ ಕೊರತೆಯನ್ನು ನೀಗಿಸಿದಂತಾಗಿದೆ. ಪ್ರತಿಯೊಬ್ಬರೂ ಉಳಿತಾಯ ಖಾತೆ ಹೊಂದುವ ಮೂಲಕ ಉಳಿತಾಯ ಮನೋ`ಾವನೆಯನ್ನು ಬೆಳೆಸಿ ಗ್ರಾಮದ ಹಾಗೂ ಬ್ಯಾಂಕ್ನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು. ಕಕ್ಯಪದವು ಶ್ರೀ ಪಂಚದುಗರ್ಾ ಪರಮೇಶ್ವರಿ ದೇವಸ್ಥಾನದ ಸ್ಥಾಪಕಾ`್ಯಕ್ಷ , ಕಟ್ಟಡ ಮಾಲಕ ಜಾರಪ್ಪ ಶೆಟ್ಟಿ ಅವರು ಮಾತನಾಡಿ ದೇವಸ್ಥಾನ, ಶಾಲೆ, ಸಹಕಾರಿ ಸಂಘ, ಬ್ಯಾಂಕ್ಗಳಿಂದ ಜನಜೀವನದ ಪರಿವರ್ತನೆಯ ಸಾ`್ಯತೆಯಿದೆ. ಅಭಿವೃದ್ಧಿಗಾಗಿ ಸಾಲಗಾರರಾಗುವುದು ಹೆಮ್ಮೆಯ ವಿಚಾರ. ಸಕಾಲಕ್ಕೆ ಮರುಪಾವತಿಸಿ ಅದನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್`ದಲ್ಲಿ ಬ್ಯಾಂಕ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮದನ್ವಯ ಉಳಿ ಶಾಸಕರ ಮಾದರಿ ಹಿ.ಪ್ರಾ.ಶಾಲೆಗೆ ಬ್ಯಾಂಕ್ ವತಿಯಿಂದ ಕಂಪ್ಯೂಟರ್ನ್ನು ಶಾಲೆಯ ಮುಖ್ಯಶಿಕ್ಷಕ ಮನೋಹರ್ ಅವರಿಗೆ ವಿತರಿಸಲಾಯಿತು. ಗ್ರಾಮೀಣ ಪ್ರದೇಶದ ಪ್ರತಿ`ಾವಂತ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಂಕ್ನಿಂದ ದತ್ತು ಪಡೆದ ತೆಂಕಕಜೆಕಾರು ಗ್ರಾಮದ ಬರಮೇಲು ನಿವಾಸಿ ವಿಶ್ವನಾಥ – ಮಾ`ವಿ ದಂಪತಿಗಳ ಪುತ್ರಿ 1ನೇ ತರಗತಿಯ ವಿದ್ಯಾಥರ್ಿನಿ ಕು|ವೈಷ್ಣವಿಗೆ ಸಂಪೂರ್ಣ ಸೌಲ`್ಯಗಳನ್ನು ವಿತರಿಸಲಾಯಿತು. ಈ ವೇಳೆ ಬ್ಯಾಂಕ್ ಸ್ಥಾಪನೆಗೆ ಸಹಕರಿಸಿದ ಗಣ್ಯರನ್ನು ಬ್ಯಾಂಕ್ ವತಿಯಿಂದ ಸಮ್ಮಾನಿಸಲಾಯಿತು. ಕೆ.ಆರ್.ಶೆಣೈ ಅವರನ್ನು ಸಾರ್ವಜನಿಕರ ವತಿಯಿಂದ ಜಾರಪ್ಪ ಶೆಟ್ಟಿ ಅವರು ಸಮ್ಮಾನಿಸಿದರು. ಪ್ರಥಮ ಗ್ರಾಹಕರ ಖಾತೆ ಪುಸ್ತಕವನ್ನು ಜಾರಪ್ಪ ಶೆಟ್ಟಿ ಅವರಿಗೆ ಮತ್ತು ಪ್ರಥಮ ಸಾಲ ಪತ್ರವನ್ನು ಅಬ್ದುಲ್ ರಹಿಮಾನ್ ಅವರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕ್ ಎ.ಜಿ.ಎಂ. ರಾಜರಾಮ್ ಶೆಟ್ಟಿ , ವಿವಿ` ಶಾಖೆಗಳ ಪ್ರಬಂ`ಕರಾದ ಬೇಬಿ ಕುಂದರ್, ಪ್ರಶಾಂತ್ ಕುಮಾರ್, ನಿತಿನ್ ಶೆಣೈ , ಪ್ರಣವ್ ಕುಮಾರ್, ಸಿಗ್ನಾ ಈಪೂನ್, ಸೌಮ್ಯ ರಾವ್, ತಾ.ಪಂ.ಸದಸ್ಯ ಸಂಪತ್ ಕುಮಾರ್ ಶೆಟ್ಟಿ , ಪ್ರಗತಿಪರ ಕೃಷಿಕ ಶಿವರಾಮ ಶೆಟ್ಟಿ ನಡುಮೊಗರುಗುತ್ತು , ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಅ`್ಯಕ್ಷ ಕೆ. ಮಾಯಿಲಪ್ಪ ಸಾಲಿಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಮಂಗಳೂರು ಪ್ರಾದೇಶಿಕ ಪ್ರಬಂ`ಕಿ ಕುಸುಮ ಬಿ.ಎಮ್. ಅವರು ಸ್ವಾಗತಿಸಿದರು. ಕಕ್ಯಪದವು ಶಾಖಾಪ್ರಬಂ`ಕ ವಿನ್ಯಾಸ್ ಶೆಟ್ಟಿ ವಂದಿಸಿದರು. ಪೆನರ್ೆ ಶಾಖಾ ಪ್ರಬಂ`ಕ ಸದಾಶಿವ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
—————————————————————
ಕ್ಯಾಪ್ಷನ್ :
ಚಿತ್ರ: ತೀಥರ್ೇಶ್

By Suddi9

Leave a Reply

Your email address will not be published. Required fields are marked *