ಬಂಟ್ವಾಳ:ತಾಲ್ಲೂಕಿನ ಸೋಣರ್ಾಡು ಸಮೀಪದ ಕುರಿಯಾಳ ನಿವಾಸಿ, ಹಿರಿಯ ಅಬಕಾರಿ ಗುತ್ತಿಗೆದಾರ ವಲೇರಿಯನ್ ಪಿಂಟೊ (72) ಇವರು ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ಈ ಹಿಂದೆ ತಾಲ್ಲೂಕಿನ ಎಲ್ಲಾ ಮದ್ಯದಂಗಡಿಗಳಿಗೆ ಮದ್ಯ ಸರಬರಾಜು ಗುತ್ತಿಗೆ ವಹಿಸಿಕೊಂಡು ಬಳಿಕ ಬಂಟ್ವಾಳ, ಬಿ.ಸಿ.ರೋಡ್, ಮೆಲ್ಕಾರ್ನಲ್ಲಿ ಮದ್ಯದಂಗಡಿ ಆರಂಭಿಸಿದ್ದರು. ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ‘ಪಿಂಟೋ ಕಾಂಪ್ಲೆಕ್ಸ್’ ಎಂಬ ವಸತಿಗೃಹ ನಡೆಸುತ್ತಿದ್ದರು.
