ಮುಂಬಯಿ : ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಮಹಾಸಮರದ ಹಿನ್ನೆಲೆಯಲ್ಲಿ ಇಂದು ತಾಲೂಕಿನ 258 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವು ನಡೆಯಿತು. ಬೆಳಿಗ್ಗೆÉಯಿಂದ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆ ಮುಕ್ತಾಯಗೊಂಡಿತು. ಒಟ್ಟಾರೆ ಕ್ಷೇತ್ರದಲ್ಲಿ ಶೇ.80ರಷ್ಟು ಮತದಾನವಾಗಿದೆ.
ಬಿಜೆಪಿ ಅಭ್ಯಥಿರ್ü ಡಾ| ಕೆ.ಸಿ ನಾರಾಯಣ ಗೌಡ ಅವರು ಪತ್ನಿ ದೇವಕಿ ಎನ್. ಗೌಡ ಹಾಗೂ ಸುಪಿತ್ರಿ ನೇಹಾ ಕರಣ್ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಬಳಿಕ ಮತದಾನ ಕೇಂದ್ರದಿಂದ ಹೊರಬಂದು ವಿಜಯದ ಸಂಕೇತವನ್ನು ಪ್ರದರ್ಶಿಸಿ ತಮ್ಮ ಗೆಲುವು ನಿಚ್ಛಳವಾಗಿದೆ ಎಂದರು.
ಸತತ ಎರಡು ಅವಧಿಗೆ ಗೆದ್ದು ತಾಲೂಕಿನ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದ ಡಾ| ನಾರಾಯಣ ಗೌಡ ಪಕ್ಷದ ವರ್ತನೆಗೆ ಮನನೊಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಶಾಸಕ ಸ್ಥಾನದಿಂದ ಅನರ್ಹಗೊಂಡು ಮೂರನೇ ಗೆಲುವಿಗೆ ಮತದಾರರ ಮುಂದೆ ಬಂದಿರುವ ಸ್ವಾಭಿಮಾನಿ ಬಿಜೆಪಿ ಅಭ್ಯಥಿರ್ ಎಂದೆಣಿಸುವರು.



