ಬಂಟ್ವಾಳ : ಬಂಟ್ವಾಳ -ವೆಳ್ಳಪುರಂ ರಾಷ್ಟ್ರೀಯ ಹೆದ್ದಾರಿ 234ನ ಪುಂಜಾಲಕಟ್ಟೆ ಪೇಟೆ ಸಮೀಪ ರಸ್ತೆ ಮೋರಿಯ ತಡೆಗೋಡೆ ಕುಸಿದು ಬಿದ್ದಿದ್ದು ಅಪಾಯಕಾರಿಯಾಗಿ ಪರಿಣಮಿಸಿತ್ತು. ತುಳುನಾಡ ರಕ್ಷಣಾವೇದಿಕೆ ಪುಂಜಾಲಕಟ್ಟೆ ಘಟಕ ಮೋರಿಗೆ ಎಚ್ಚರಿಕೆಯ ರಿಬ್ಬನ್ ಪಟ್ಟಿ ಕಟ್ಟುವುದರ ಮೂಲಕ ತಡೆಗೋಡೆಯನ್ನು ಕೂಡಲೇ ನಿಮರ್ಿಸುವಂತೆ ಆಗ್ರಹಿಸಿದೆ.

ಬಂಟ್ವಾಳದಿಂದ ಬೆಳ್ತಂಗಡಿಗೆ ಸಾಗುವ ದಾರಿಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆ ಸಮೀಪ ತೋಡಿಗೆ ಮೋರಿ ನಿಮರ್ಿಸಿ ತಡೆಗೋಡೆ ರಚಿಸಲಾಗಿತ್ತು. ಇಲ್ಲಿ ರಸ್ತೆ ಕಿರಿದಾಗಿದ್ದು ವಾಹನಗಳು ಏಕಕಾಲದಲ್ಲಿ ಎದುರುಬದುರಾಗಿ ಸಂಚರಿಸುವಂತಿಲ್ಲ. ಈ ಹಿಂದೆ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆ ಬಳಿಕ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದಜರ್ೆ ಹೊಂದಿತ್ತು. ಆದರೆ ರಸ್ತೆ ಅಗಲೀಕರಣಗೊಂಡಿರಲಿಲ್ಲ. ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಪರಸ್ಪರ ಎದುರಾದಾಗ ಮತ್ತು ಓವರ್ಟೇಕ್ ಮಾಡುವಾಗ ತಡೆಗೋಡೆಯ ಮೇಲೆಯೇ ಹಾದುಹೋಗುತ್ತಿದ್ದು ತಡೆಗೋಡೆ ಕುಸಿದುಬಿದ್ದಿತ್ತು . ಕಳೆದ ವರ್ಷ ಪಿಕಪ್ ವಾಹನವೊಂದು ತಡೆಗೋಡೆಗೆ ಢಿಕ್ಕಿಹೊಡೆದು ತೋಡಿಗೆ ಬಿದ್ದಿತ್ತು . ಬಸ್ , ಲಾರಿ, ಮೊದಲಾದ ಘನವಾಹನಗಳ ಚಕ್ರಗಳು ರಸ್ತೆಯಂಚಿನಲ್ಲಿಯೇ ಚಲಿಸಿ ಎಷ್ಟೋಬಾರಿ ಸಂಭಾವ್ಯ ಅಪಘಾತಗಳು ತಪ್ಪಿರುವುದಾಗಿ ಸ್ಥಳೀಯ ಪ್ರತ್ಯಕ್ಷದಶರ್ಿಗಳು ಹೇಳುತ್ತಾರೆ. ರಸ್ತೆಯಂಚಿನಲ್ಲಿರುವ ನೀರಿನ ಪೈಪ್ ಒಡೆದುಹೋಗಿ ಹಲವಾರುಬಾರಿ ಬದಲಾಯಿಸಿರುವುದಾಗಿ ಕುಡಿಯುವ ನೀರಿನ ಮೇಲ್ವಿಚಾರಕ ತಿಳಿಸಿದ್ದಾರೆ. ಆದರೆ ಇದುವರೆಗೆ ಸಂಬಂತ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ .
ವಿವಿಧ ಜನಪ್ರತಿನಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಇಲಾಖೆಗೆ ಮಾಹಿತಿ ನೀಡಿಲ್ಲವೆಂದು ರಕ್ಷಣಾವೇದಿಕೆ ಆರೋಪಿಸಿದೆ. ಆದುದರಿಂದ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ , ಪದಾಕಾರಿಗಳಾದ ಜೇಮ್ಸ್ಸುನಿಲ್ ಅಂಚನ್, ದಿನೇಶ್ ನಾಯಕ್, ಪ್ರವೀಣ್ ಶೆಟ್ಟಿ ಅವರು ಎಚ್ಚರಿಕೆಯ ರಿಬ್ಬನ್ ಕಟ್ಟಿ ಅಪಾಯದ ಸೂಚನೆ ನೀಡಿದ್ದಾರೆ.
