ಬಂಟ್ವಾಳ: ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು. ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ ಎಂದು ಪುಂಜಾಲಕಟ್ಟೆ ಆರಕ್ಷಕ ಠಾಣಾಕಾರಿ ಲತೇಶ್ ಕುಮಾರ್ ಅವರು ಹೇಳಿದರು.

ಅವರು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇವರ ನೇತೃತ್ವದಲ್ಲಿ ಪಿಲಾತಬೆಟ್ಟು ಗ್ರಾ.ಪಂ., ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ ,ಪುಂಜಾಲಕಟ್ಟೆ ಆರಕ್ಷಕ ಠಾಣೆ, ಪುಂಜಾಲಕಟ್ಟೆ ಸ.ಪ್ರ.ದ.ಕಾಲೇಜು ರಾ.ಸೇ.ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕ, ಯೂತ್ ರೆಡ್ ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಘಟಕ, ಮಂಗಳೂರು ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಇವರ ಸಹಭಾಗಿತ್ವದಲ್ಲಿ ಸೆ.28ರಂದು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಸಭಾಭವನದಲ್ಲಿ ಜರಗಿದ ಬೃಹತ್ ರಕ್ತದಾನ ಹಾಗೂ ರಕ್ತ ವಗರ್ೀಕರಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಪುಂಜಾಲಕಟ್ಟೆ ಸ.ಪ್ರ.ದ.ಕಾಲೇಜು ರಾ.ಸೇ.ಯೋಜನೆ ಯೋಜನಾಕಾರಿ ಪ್ರೊ|ಮಾಧವ ಎಂ., ರೋವರ್ಸ್ ಮತ್ತು ರೇಂಜರ್ಸ್ ಘಟಕ ಯೋಜನಾಕಾರಿ ಪ್ರೊ|ರಾಮಚಂದ್ರ ಡಿ., ಯೂತ್ ರೆಡ್ಕ್ರಾಸ್ ಘಟಕ ಯೋಜನಾಕಾರಿ ರವಿಶಂಕರ್, ಮಡಂತ್ಯಾರು ಜೇಸಿ ಅಧ್ಯಕ್ಷ ಐವನ್ ಡಿಸೋಜ, ಪಿಲಾತಬೆಟ್ಟು ಗ್ರಾ.ಪಂ. ಪಂ.ಅ.ಅಕಾರಿ ಧರ್ಮಪಾಲ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ವನಿತಾ ಸಮಾಜ ಉಪಾಧ್ಯಕ್ಷೆ ಉಮಾ ಡಿ.ಗೌಡ, ಸ.ಪ್ರ.ದ.ಕಾಲೇಜು ಉಪನ್ಯಾಸಕ ಸುಮಂತ್, ಮಂಗಳೂರು ಜಿಲ್ಲಾ ಆಸ್ಪತ್ರೆ ಕೌನ್ಸಿಲರ್ ಶ್ರೀಲತಾ, ಮಂಡಳಿ ಅಧ್ಯಕ್ಷ ಸಂತೋಷ್ ಮೂಜರ್ೆ ಉಪಸ್ಥಿತರಿದ್ದರು.
ಮಂಡಳಿ ಕಾರ್ಯದಶರ್ಿ ರವೀಂದ್ರ ಶೆಟ್ಟಿ ಅನಿಲಡೆ ಸ್ವಾಗತಿಸಿದರು. ಹರೀಶ್ಚಂದ್ರ ಶೆಟ್ಟಿಗಾರ್ ವಂದಿಸಿದರು. ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಠಾಣಾಕಾರಿ ಲತೇಶ್ ಕುಮಾರ್, ಸಿಬಂದಿಗಳಾದ ಆಸಿಫ್, ಸುಭಾಶ್ ಶೆಣೈ, ಪ್ರವೀಣ್ ಮತ್ತು ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಮುರುಘೇಂದ್ರ ವನಿತಾ ಸಮಾಜ, ತುಳುನಾಡ ರಕ್ಷಣಾವೇದಿಕೆ ಪದಾಕಾರಿಗಳು ಮತ್ತು ಸ.ಪ್ರ.ದ.ಕಾಲೇಜು ವಿದ್ಯಾಥರ್ಿಗಳು ರಕ್ತದಾನ ಮಾಡಿದರು.50 ಯುನಿಟ್ ರಕ್ತ ಮಾತ್ರ ಸಂಗ್ರಹಿಸಲು ಸಾಧ್ಯವಾಗಿದ್ದು ದಾನಿಗಳು ನಿರಾಸೆ ಹೊಂದಿದರು. ಸಂಗ್ರಹಿಸಿದ ರಕ್ತ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ನೀಡಲಾಯಿತು.
