ಉಡುಪಿ : ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಟಾನ ಬೆಂಗಳೂರು ಇದರ ವತಿಯಿoದ ನ .30 ರಂದು ನಯನ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ವಿಚಾರ ಸಂಕಿರಣ ಕಾಯ೯ಕ್ರಮದಲ್ಲಿ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಸ್ವಾಮಿ ವಿವೇಕಾನಂದ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೊಳದ ಮಠದ ಶ್ರೀ ಶಾಂತವೀರ ಶ್ರೀ, ವಿಶ್ವಕಮ೯ ಮಠದ ಶ್ರೀಗಳು, ಹಿನ್ನೆಲೆ ಗಾಯಕಿ ಅನುರಾಧ ಭಟ್, ಮಾಜಿ ಸಚಿವ ಪ್ರೊ.ಬಿ ಚಂದ್ರಶೇಖರ್, ಗುಣವoತ ಮಂಜು ಮುಂತಾದವರಿದ್ದರು.

