ಉಡುಪಿ : ಕಾಪು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಮಣಿಪುರ, ಬೆರಣಕುದ್ರು ಇಲ್ಲಿಯ ರಾಮರ ತೋಟದ ಸನಿಹ ಹರಿಯುವ ಪಾಪನಾಶನಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾದ ಘಟನೆ ಶನಿವಾರ ನಡೆದಿದೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ವಾರಸುದಾರರು ಕಾಪು ಠಾಣೆಯ ನಾಗರಿಕ ಸಹಾಯ ಕೇಂದ್ರ ಅಥವಾ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಶವ ಹೊಳೆಯಿಂದ ಮೇಲೆತ್ತಲು ಹಾಗೂ ಶವ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಸಹಕರಿಸಿದ್ದಾರೆ.
ಮೃತ ವ್ಯಕ್ತಿಗೆ ಸುಮಾರು 55 ವರ್ಷ ಪ್ರಾಯ ಆಗಿರಬಹುದೆಂದು ಅಂದಾಜಿಸಲಾಗಿದೆ. ಜೇಬಿನಲ್ಲಿ ಮೋಹನ್ ಶೆಟ್ಟಿ ಹೆಸರು ಬರೆದಿರುವ ಚೀಟಿ ಲಭ್ಯವಾಗಿದೆ. ಸಾವಿಗೆ ಸ್ವಷ್ಟ ಮಾಹಿತಿ ತಿಳಿದು ಬಂದಿಲ್ಲ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

