ಮಹಿಳೆಯು ದೌರ್ಜನ್ಯ ನಡೆದಾಗ ದೌರ್ಜನ್ಯವನ್ನು ತಡೆದು ಎದ್ದು ನಿಲ್ಲುವಂತಾಗಲು ಮಹಿಳಾ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು. ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಜ್ಞಾ ಸಲಹಾ ಕೇಂದ್ರ ಮಂಗಳೂರು ಇದರ ಸಂಯೋಜಕಿಯಾದ ಶ್ರೀಮತಿ ಧನಲಕ್ಷ್ಮಿ ಕೈಕಂಬದಲ್ಲಿ ನಡೆದ ಮಹಿಳೆಯ ಹಕ್ಕು ಮತ್ತು ದೌರ್ಜನ್ಯ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಹೇಳಿದರು.
ಚೈಲ್ಡ್ ಫಂಡ್ ಇಂಡಿಯಾ ಮಂಗಳಜ್ಯೋತಿ ವಾಮಂಜೂರು ಇವರ ಆಶ್ರಯದಲ್ಲಿ ದಿಶಾ ಟ್ರಸ್ಟ್ (ರಿ) ಕೈಕಂಬ ಮತ್ತು ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟ ಗುರುಪುರ ಕೈಕಂಬ ಇವರ ಸಹಕಾರದೊಂದಿಗೆ ಕೈಕಂಬ ದಿಶಾ ಟ್ರಸ್ಟ್ ಕಚೇರಿಯಲ್ಲಿ ಮಹಿಳೆಯ ಹಕ್ಕು ಮತ್ತು ದೌರ್ಜನ್ಯ ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸವಿತ ಕೊಳವೂರು ವಹಿಸಿದ್ದರು. ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿವಾಲ್ಡರ್, ಒಕ್ಕೂಟದ ಕಾರ್ಯದಶರ್ಿ ಎಲ್ಸಿ ಡಿ ಸೋಜ, ಕೋಶಾಧಿಕಾರಿ ಅನುಸೂಯ ಕಾಜವ, ಉಪಾಧ್ಯಕ್ಷರಾದ ಧನಲಕ್ಷ್ಮಿ ಕೊಳಂಬೆ , ಜೊತೆ ಕಾರ್ಯದಶರ್ಿ ತೌಸೀಯ ಉಳಾಯಿಬೆಟ್ಟು, ಮಂಗಳಜ್ಯೋತಿ ಕಾರ್ಯಕ್ರಮ ಸಂಯೋಜಕ ಶ್ರೀ ಹರೀಶ್ ಕುಮಾರ್ ಕುಲಶೇಖರ ಉಪಸ್ಥಿತರಿದ್ದರು.
ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ರುದೇಶ್ ಕಾರ್ಯಕ್ರಮ ನಿರೂಪಿಸಿ, ಹರೀಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಶ್ರೀಮತಿ ಹಾಜ್ರಮ್ಮ ಕಂದಾವರ ಸ್ವಾಗತಿಸಿ ಅನುಸೂಯ ಕಾಜವ ವಂದಿಸಿದರು.
ಮಹಿಳೆಯು ದೌರ್ಜನ್ಯ ನಡೆದಾಗ ದೌರ್ಜನ್ಯವನ್ನು ತಡೆದು ಎದ್ದು ನಿಲ್ಲುವಂತಾಗಲು ಮಹಿಳಾ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು

