ಬಂಟ್ವಾಳ :  ತಾ| ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ಏಳನೇ ವರ್ಷದ ಪ್ರಯುಕ್ತ ನಡೆದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

3011pkt2

ಪ್ರಗತಿಪರ ಕೃಷಿಕ ರವೀಂದ್ರ ಅಡಪ ದಿಡಿಂಬಿಲ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಕಂಬಳಕ್ಕೆ ಚಾಲನೆ ನೀಡಿದರು.  ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಹಾಗೂ ಕಂಬಳ ಕೋಣಗಳ ಯಜಮಾನ ಸುರೇಶ್ ಶೆಟ್ಟಿ ಮಿಯ್ಯಾರು ಅವರು ಉದ್ಘಾಟಿಸಿದರು. ಉಪ್ಪಿನಂಗಡಿ ದಂತ ವೈದ್ಯ ಡಾ.ರಾಜಾರಾಂ ಕೋಂಗುಜೆ ಅವರು ಅಧ್ಯಕ್ಷತೆ ವಹಿಸಿದ್ದರು.

3011pkt2A
ಸತ್ಯ ಧರ್ಮ ಕಂಬಳ ಸಮಿತಿ ಅಧ್ಯಕ್ಷ ರವಿ ಕಕ್ಯಪದವು, ಕಂಬಳ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಸತ್ಯ ಧರ್ಮ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ  ಅಧ್ಯಕ್ಷ  ಮಹೇಂದ್ರ ಕಾಯರ್‍ಗುರಿ, ಕೋಶಾಧಿಕಾರಿ ಉಮೇಶ್ ಪೂಜಾರಿ, ಗೆಳೆಯರ ಬಳಗದ ಪದಾ„ಕಾರಿಗಳಾದ ನ್ಯಾಯವಾದಿ ರಂಜಿತ್ ಮೈರ, ಪುರುಷೋತ್ತಮ ಪಲ್ಕೆ, ಕುಸುಮಾ`ರ ಉರ್ಕಿ, ಪ್ರಮುಖರಾದ ಚಿದಾನಂದ ರೈ, ಗಂಗಾ`ರ ಪೂಜಾರಿ ಕಜೆಕಾರು, ಪ್ರವೀಣ್ ಶೆಟ್ಟಿ ಕಿಂಜಾಲು, ಸುಧಾಕರ ಶೆಟ್ಟಿ ಶಂಕರಬೆಟ್ಟು, ಪ್ರದೀಪ್, ದಿನೇಶ್ ಪೂಜಾರಿ ಕುಕ್ಕಾಜೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಸುಂದರ ಪೂಜಾರಿ ಕೊಲೆಂಜಿರಕೊಡಿ,

20191130_104140

ಜಯ ಪೂಜಾರಿ ಕುಕ್ಕಾಜೆ, ಮಹಮ್ಮದ್, ಯೋಗೀಶ್ ಪೂಜಾರಿ, ರಫೀಕ್ ಬನತ್ತಪಲ್ಕೆ, ಶಾಂತಪ್ಪ ಪೂಜಾರಿ ಹಟದಡ್ಕ, ದಯಾನಂದ ಮುಂಡ್ರೇಲು, ಲಿಂಗಪ್ಪ ಗೌಡ ಮಹಮ್ಮಾಯಿ, ಪ್ರಶಾಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.  ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಗೆ ಮುನ್ನ ಮೈರ ಶ್ರೀ ರಾಮಾಂಜನೇಯ ಭಜನ ಮಂದಿರದಿಂದ ಬರ್ಕೆಜಾಲು ವರೆಗೆ ಮೆರವಣಿಗೆ ನಡೆಯಿತು.

By suddi9

Leave a Reply

Your email address will not be published. Required fields are marked *